ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್ ಪತ್ರಿಕಾಗೋಷ್ಠಿ: ಇರಾನ್‌ಗೆ ಅಣ್ವಸ್ತ್ರ ಹೊಂದುವ ಅವಕಾಶ ಕೊಡಲ್ಲ

Last Updated 8 ಜನವರಿ 2020, 18:17 IST
ಅಕ್ಷರ ಗಾತ್ರ

ವಾಷಿಂಗ್ಟನ್:‘ಇರಾನ್‌ ಭಯೋತ್ಪಾನೆಯ ದೊಡ್ಡ ಪ್ರಾಯೋಜಕ ರಾಷ್ಟ್ರ. ನಾನು ಅಧ್ಯಕ್ಷ ಆಗಿರುವ ತನಕ ಇರಾನ್‌ಗೆ ಅಣ್ವಸ್ತ್ರ ಹೊಂದಲು ಬಿಡುವುದಿಲ್ಲ’ ಎಂದು ಟ್ರಂಪ್‌ ತಿಳಿಸಿದರು.

ಇರಾನ್, ಅಮೆರಿಕನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಹಿನ್ನಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು.

ಜನವರಿ 3ರಂದು ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಅಮೆರಿಕ ಸೇನೆ ರಾಕೆಟ್ ದಾಳಿ ನಡೆಸಿ ಇರಾನ್‌ ಸೇನೆಯ ಕಮಾಂಡರ್ ಖಾಸಿಂ ಸುಲೇಮಾನಿಯನ್ನು ಹತ್ಯೆಗೈದಿತ್ತು. ಇದು ಅಂತರರಾಷ್ಟ್ರೀಯಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅದರ ಕುರಿತು ಟ್ರಂಪ್‌ ಮಾತನಾಡಿದರು.

‘ಇರಾನ್​ ದಾಳಿಯಲ್ಲಿ ಅಮೆರಿಕ ಅಥವಾ ಇರಾಕ್​ ದೇಶದ ಯಾವೊಬ್ಬ ಯೋಧರೂ ಮೃತಪಟ್ಟಿಲ್ಲ. ಕೆಲವೊಬ್ಬರಿಗೆ ಸಣ್ಣಪುಟ್ಟ ಗಾಯಗಾಳಾಗಿವೆ’ ಎಂದು ಸ್ಪಷ್ಟನೆ ನೀಡಿದರು.

‘1979ನಿಂದ ಅಮೆರಿಕ ಮಧ್ಯಪ್ರಾಚ್ಯ ದೇಶಗಳ ವರ್ತನೆಯನ್ನು ಸಹಿಸಿಕೊಳ್ಳುತ್ತ ಬಂದಿದೆ. ಆ ದಿನಗಳು ಈಗ ಮುಕ್ತಾಯವಾಗಿದೆ. ಇರಾನ್‌ ಭಯೋತ್ಪಾದನೆಯ ದೊಡ್ಡ ಪ್ರಾಯೋಜಕ ರಾಷ್ಟ್ರವಾಗಿದೆ. ಅಣ್ವಸ್ತ್ರ ಹೊಂದುವ ಪ್ರಯತ್ನ ಮುಂದುವರಿಸುತ್ತಾ ನಾಗರಿಕ ಸಮಾಜಕ್ಕೆ ಬೆದರಿಕೆಯೊಡ್ಡುತ್ತಿದೆ. ನಾವು ಅದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಹೇಳಿದರು.

‘ಅಮೆರಿಕದವರ ಜೀವಕ್ಕೆ ಬೆದರಿಕೆಯೊಡ್ಡಿದ್ದ ಭಯೋತ್ಪಾದಕನನ್ನು ಕಳೆದ ವಾರ ನಾವು ಹೊಡೆದುರುಳಿಸಿದ್ದೇವೆ. ನನ್ನ ನಿರ್ದೇಶನದ ಮೇರೆಗೆ ಅಮೆರಿಕ ಸೇನೆ ವಿಶ್ವದ ಪ್ರಮುಖ ಉಗ್ರ ಸುಲೇಮಾನಿಯನ್ನು ಹತ್ಯೆಗೈದಿದೆ’ ಎಂದು ವಿವರಿಸಿದರು.

‘ಈಗಾಗಲೇ ನಡೆದಿರುವ ಸಾಕಷ್ಟು ಹಿಂಸೆಗಳಿಗೆ ಸುಲೇಮಾನಿ ನೇರ ಹೊಣೆಗಾರ. ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆ ಸೇರಿ ಅನೇಕ ಸಂಘಟನೆಗಳಿಗೆ ಅವನುತರಬೇತಿ ನೀಡುತ್ತಿದ್ದ. ಅಮೆರಿಕ ಸೇನೆಯ ಸಾವಿರಾರು ಮಂದಿಯ ಹತ್ಯೆಗೆ ಕಾರಣಕರ್ತ. ಅಮೆರಿಕದವರನ್ನು ಗುರಿಯಾಗಿಸಿಕೊಂಡು ಅವನು ಮತ್ತುಷ್ಟು ದಾಳಿಗೆ ಸಂಚು ರೂಪಿಸಿದ್ದ. ಅದನ್ನು ನಾವು ತಡೆದಿದ್ದೇವೆ. ತುಂಬ ಹಿಂದೆಯೇ ಅವನನ್ನು ಕೊಲ್ಲಬೇಕಿತ್ತು. ಅದು ಈಗ ಆಗಿದೆ. ಅವನ ಹತ್ಯೆ ಮೂಲಕ ಭಯೋತ್ಪಾದಕರಿಗೆ ನಾವು ಪ್ರಮುಖ ಸಂದೇಶ ನೀಡಿದ್ದೇವೆ’ ಎಂದು ಹತ್ಯೆಯನ್ನು ಸಮರ್ಥಿಸಿಕೊಂಡರು.

‘ಇರಾನ್‌ ಆಕ್ರಮಣಶೀಲತೆಗೆ ಪ್ರತಿಯಾಗಿ ಅಲ್ಲಿನ ಸರ್ಕಾರ ಮೇಲೆ ತಕ್ಷಣದಿಂದಲೇ ಹೆಚ್ಚುವರಿ ಆರ್ಥಿಕ ದಿಗ್ಬಂಧನ ಹೇರುವುದ ಸೇರಿದಂತೆ ವಿವಿಧ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT