ಹಸೀನಾ ಮೇಲೆ ದಾಳಿ ಪ್ರಕರಣ: 9 ಮಂದಿಗೆ ಗಲ್ಲು ಶಿಕ್ಷೆ

ಶುಕ್ರವಾರ, ಜೂಲೈ 19, 2019
24 °C
ಬಾಂಗ್ಲಾ ದೇಶ: 25 ವರ್ಷಗಳ ಹಿಂದಿನ ಘಟನೆ

ಹಸೀನಾ ಮೇಲೆ ದಾಳಿ ಪ್ರಕರಣ: 9 ಮಂದಿಗೆ ಗಲ್ಲು ಶಿಕ್ಷೆ

Published:
Updated:

ಢಾಕಾ: ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಅವರ ಮೇಲೆ 25 ವರ್ಷಗಳ ಹಿಂದೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾ ನ್ಯಾಯಾಲಯ ಬುಧವಾರ, ಬಿಎನ್‌ಪಿ ನೇತೃತ್ವದ ಮೈತ್ರಿಕೂಟದ 9 ಕಾರ್ಯಕರ್ತರಿಗೆ ಮರಣದಂಡನೆ ಹಾಗೂ ಇತರ 25 ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

25 ವರ್ಷಗಳ ಹಿಂದೆ ಹಸೀನಾ ವಿರೋಧಪಕ್ಷದ ನಾಯಕಿಯಾಗಿದ್ದಾಗ ದಾಳಿ ಪ್ರಕರಣ ನಡೆದಿತ್ತು. ಸೆಪ್ಟೆಂಬರ್ 23, 1994ರಂದು ಪಬ್ನಾದ ಈಶ್ವರ್ಡೆಗೆ ಪ್ರಚಾರಕ್ಕೆ ತೆರಳಿದ್ದಾಗ ಹಸೀನಾ ಅವರಿದ್ದ ರೈಲಿನ ಮೇಲೆ ದಾಳಿ ನಡೆದಿತ್ತು.ದಾಳಿಯಲ್ಲಿ ಹಸೀನಾ ಬದುಕುಳಿದಿದ್ದರು. ಆ ಸಂದರ್ಭದಲ್ಲಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ (ಬಿಎನ್‌ಪಿ) ಬೇಗಂ ಖಾಲಿದಾ ಜಿಯಾ ಪ್ರಧಾನಿಯಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ನಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್‌ ನ್ಯಾಯಮೂರ್ತಿ ರೋಸ್ಟಮ್ ಅಲಿ, 9 ಮಂದಿಗೆ ಮರಣದಂಡನೆ, 25 ಮಂದಿಗೆ ಜೀವಾವಧಿ ಹಾಗೂ ಇತರ 13 ಮಂದಿಗೆ 10 ವರ್ಷಗಳ ಜೈಲುಶಿಕ್ಷೆ ವಿಧಿಸಿದ್ದಾರೆ. ದಾಳಿಗೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ಒಟ್ಟು 135 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು.

ತೀರ್ಪು ವಿರೋಧಿಸಿ ಬಿಎನ್‌ಪಿ ಕಾರ್ಯಕರ್ತರು ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಅವಾಮಿ ಲೀಗ್‌ನ ಕಾರ್ಯಕರ್ತರು ಮತ್ತು ಬೆಂಬಲಿಗರು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿ, ಮೆರವಣಿಗೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !