ಗುರುವಾರ , ಜೂಲೈ 9, 2020
28 °C

ಬೇಹುಗಾರಿಕೆ ನಡೆಸುತ್ತಿದ್ದ ಭಾರತದ ಡ್ರೋನ್‌ ನಾಶ: ಪಾಕಿಸ್ತಾನ

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: ಗಡಿ ನಿಯಂತ್ರಣಾ ರೇಖೆ (ಎಲ್‌ಒಸಿ) ದಾಟಿ ಒಳನುಗ್ಗಿದ ‘ಭಾರತದ ಬೇಹುಗಾರಿಕಾ ಕ್ವಾಡ್‌ಕಾಪ್ಟರ್‌(ಡ್ರೋನ್‌)’ ಒಂದನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನ ಸೇನೆ ಶನಿವಾರ ತಿಳಿಸಿದೆ. 

‘ಖಂಜರ್‌ ವಲಯದಲ್ಲಿ ಪಾಕಿಸ್ತಾನದ ವಾಯುಪ್ರದೇಶವನ್ನು ಉಲ್ಲಂಘಿಸಿ ಸಣ್ಣ ಗಾತ್ರದ ಕಾಪ್ಟರ್, ಎಲ್‌ಒಸಿ ದಾಟಿ 500 ಮೀ. ಒಳಗಡೆ ಪ್ರವೇಶಿಸಿತ್ತು’ ಎಂದು ಸೇನೆಯ ವಕ್ತಾರ ಮೇಜರ್‌ ಜನರಲ್‌ ಬಾಬರ್‌ ಇಫ್ತಿಕಾರ್‌ ತಿಳಿಸಿದರು.

8ನೇ ಕಾಪ್ಟರ್‌: ‘ಈ ವರ್ಷದಲ್ಲಿ ಭಾರತದ ಎಂಟನೇ ಕ್ವಾಡ್‌ಕಾಪ್ಟರ್‌ ಅನ್ನು ಪಾಕಿಸ್ತಾನ ಸೇನೆ ಹೊಡೆದುರುಳಿಸಿದೆ. ಮೇ 27ರಂದು ಹಾಗೂ ಮೇ 29ರಂದು ಪಾಕಿಸ್ತಾನದ ವಾಯುಪ್ರದೇಶ ಪ್ರವೇಶಿಸಿದ್ದ ಎರಡು ಕ್ವಾಡ್‌ಕಾಪ್ಟರ್‌ಗಳನ್ನು ಹೊಡೆದುರುಳಿಸಿದ್ದೆವು’ ಎಂದು ಇಫ್ತಿಕಾರ್‌ ಹೇಳಿದರು. 

ಕಳೆದ ಬಾರಿ ಪಾಕಿಸ್ತಾನದ ಈ ಆರೋಪವನ್ನು ಭಾರತ ನಿರಾಕರಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು