ಭಾನುವಾರ, ಜೂನ್ 7, 2020
22 °C

ಕೊರೊನಾ: ಪಟ್ಟು ಸಡಿಲಿಸಿದ ಚೀನಾ

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಕೊರೊನಾ ವೈರಸ್‌ ಮೂಲ ಪತ್ತೆಯ ತನಿಖೆಯನ್ನು ವಿರೋಧಿಸುತ್ತಿದ್ದ ಚೀನಾ ಇದೀಗ ಪಟ್ಟುಸಡಿಲಿಸಿದೆ.

ತನಿಖೆಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಭೆಯಲ್ಲಿ (ಡಬ್ಲ್ಯುಎಚ್ಎ) ಐರೋಪ್ಯ ಒಕ್ಕೂಟ ಮಂಡಿಸಿದ್ದ ಕರಡು ನಿರ್ಣಯಕ್ಕೆ ಅದೂ ಬೆಂಬಲ ವ್ಯಕ್ತಪಡಿಸಿದೆ.

ಐರೋಪ್ಯ ಒಕ್ಕೂಟ ಮಂಡಿಸಿದ್ದ ಕರಡು ನಿರ್ಣಯಕ್ಕೆ ಭಾರತ ಸೇರಿದಂತೆ 120 ರಾಷ್ಟ್ರಗಳು ಬೆಂಬಲ ನೀಡಿದ್ದವು. ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯಾದ ಡಬ್ಲ್ಯುಎಚ್‌ಎಯ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಭಾರತ ಆಯ್ಕೆಯಾಗುವ ಸಾಧ್ಯತೆಗಳಿವೆ. ಕರಡು ನಿರ್ಣಯಕ್ಕೆ ಚೀನಾ ಬೆಂಬಲದ ಕುರಿತು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿನ್‌ ಅವರು ಮಾಹಿತಿ ನೀಡಿದರು. 

‘ಕರಡು ನಿರ್ಣಯಕ್ಕೆ ಎಲ್ಲರೂ ಒಮ್ಮತ ಸೂಚಿಸಿದ್ದಾರೆ. ವೈರಸ್‌ ಮೂಲದ ಕುರಿತು, ಪಶು ಆರೋಗ್ಯ ಹಾಗೂ ಆಹಾರ ಮತ್ತು ಕೃಷಿ  ಸಂಸ್ಥೆ ಸಹಯೋಗದಲ್ಲಿ ಡಬ್ಲ್ಯುಎಚ್‌ಒ ಮುಖ್ಯಸ್ಥರು ಕಾರ್ಯನಿರ್ವಹಿಸಬೇಕು. ಯಾವ ಪ್ರಾಣಿಯಿಂದ ವೈರಸ್‌ ಹರಡಿರಬಹುದು ಹಾಗೂ ವೈರಸ್‌ ಹರಡುವ ಮೂಲಗಳನ್ನು ಆಯಾ ರಾಷ್ಟ್ರಗಳು ಪತ್ತೆ ಹಚ್ಚಬೇಕು’ ಎಂದು ಡಬ್ಲ್ಯುಎಚ್‌ಎ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು