ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆಯಲ್ಲಿ ಚೀನಾಗೆ ಮುಖಭಂಗ: ಕಾಶ್ಮೀರಕ್ಕೆ ಸಂಬಂಧಿಸಿದ ಮನವಿ ತಿರಸ್ಕೃತ

ಚೀನಾ ಮನವಿಗೆ ಭದ್ರತಾ ಮಂಡಳಿ ಕಾಯಂ ಸದಸ್ಯರಿಂದ ವಿರೋಧ
Last Updated 18 ಡಿಸೆಂಬರ್ 2019, 3:22 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ:ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಜಮ್ಮು–ಕಾಶ್ಮೀರ ಕುರಿತು ಚರ್ಚಿಸಬೇಕು ಎಂಬ ಚೀನಾದ ಮನವಿಗೆ ಕಾಯಂ ಸದಸ್ಯ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ ತಾನು ಮಂಡಿಸಿದ್ದ ಮನವಿಯನ್ನು ಹಿಂಪಡೆಯುವ ಮೂಲಕ ಚೀನಾ ಮತ್ತೊಮ್ಮೆ ಮುಖಭಂಗಕ್ಕೊಳಗಾಗಿದೆ.

ಕಾಶ್ಮೀರ ವಿಚಾರದ ಬಗ್ಗೆಭದ್ರತಾ ಮಂಡಳಿಯ ಗೋಪ್ಯ ಸಭೆಯಲ್ಲಿ ಚರ್ಚೆಯಾಗಬೇಕು ಎಂಬಚೀನಾ ಮನವಿಗೆಕಾಯಂ ಸದಸ್ಯ ರಾಷ್ಟ್ರಗಳಾದ ಫ್ರಾನ್ಸ್, ಅಮೆರಿಕ, ರಷ್ಯಾ ಮತ್ತು ಬ್ರಿಟನ್ ಮಂಗಳವಾರದ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿವೆ. ಅಲ್ಲದೆ, ಕಾಶ್ಮೀರ ವಿಚಾರವು ಭಾರತ–ಪಾಕಿಸ್ತಾನ ನಡುವಣ ದ್ವಿಪಕ್ಷೀಯ ವಿಚಾರ. ದ್ವಿಪಕ್ಷೀಯ ವಿವಾದಗಳನ್ನು ಆ ರಾಷ್ಟ್ರಗಳೇ ಬಗೆಹರಿಸಿಕೊಳ್ಳಬೇಕು. ಈ ವಿಚಾರದಲ್ಲಿ ಮಧ್ಯಪ್ರವೇಶ ಸಾಧ್ಯವಿಲ್ಲ ಎಂದು ಹೇಳಿವೆ.

ಹೀಗಾಗಿ ಇಂದು ನಡೆಯಲಿರುವಭದ್ರತಾ ಮಂಡಳಿ ಗೋಪ್ಯ ಸಭೆಯಲ್ಲಿ ಕಾಶ್ಮೀರ ವಿಚಾರ ಚರ್ಚೆಗೆ ಬರುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಚೀನಾ ಜತೆಗಿನ ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಲ್ಲಿನ ವಿದೇಶಾಂಗ ಸಚಿವ ವಾಂಗ್ ಯಿ ಜತೆ ಮಾತುಕತೆ ನಡೆಸಲು ಭಾರತ ಸಿದ್ಧವಾಗುತ್ತಿರುವ ಬೆನ್ನಲ್ಲೇ ಚೀನಾವು ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವನ್ನು ಮತ್ತೆ ಪ್ರಸ್ತಾಪಿಸಿ ಮುಜುಗರಕ್ಕೀಡಾಗಿದೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದತಿಯನ್ನು ಆಗಸ್ಟ್‌ 5ರಂದು ಭಾರತ ರದ್ದುಗೊಳಿಸಿತ್ತು. ನಂತರ ಪಾಕಿಸ್ತಾನದ ಮಿತ್ರರಾಷ್ಟ್ರ ಚೀನಾದವಿನಂತಿ ಮೇರೆಗೆಅದೇ ತಿಂಗಳಲ್ಲಿ ಭದ್ರತಾ ಮಂಡಳಿಯ ಗೋಪ್ಯ ಸಮಾಲೋಚನಾ ಸಭೆ ನಡೆದಿತ್ತು. ಆಗಲೂ ಚೀನಾಕ್ಕೆ ಹಿನ್ನಡೆಯಾಗಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT