ಸೋಮವಾರ, ಜೂನ್ 27, 2022
24 °C

ಕರ್ತಾರ್‌ಪುರ ಕಾರಿಡಾರ್ ಸ್ವಾಗತಿಸಿದ ಚೀನಾ

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್: ಐತಿಹಾಸಿಕ ಕರ್ತಾರ್‌ಪುರ ಕಾರಿಡಾರ್ ಬಳಕೆಗೆ ಮುಕ್ತವಾಗಿದ್ದನ್ನು ಚೀನಾ ಸೋಮವಾರ ಸ್ವಾಗತಿಸಿದೆ. 

‘ಭಾರತ–ಪಾಕಿಸ್ತಾನ ನಡುವೆ ಇಂತಹ ಬೆಳವಣಿಗೆಗಳನ್ನು ಸ್ವಾಗತಿಸಲಾಗುತ್ತದೆ. ಮಾತುಕತೆ ಮೂಲಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಲು ಭಾರತ–ಪಾಕಿಸ್ತಾನ ಸೌಹಾರ್ದಯುತ ನಿಲುವು ತೋರಬಹುದು’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶ್ವಾಂಗ್ ಹೇಳಿದ್ದಾರೆ. 

‘ದಕ್ಷಿಣ ಏಷ್ಯಾದಲ್ಲಿ ಉಭಯ ರಾಷ್ಟ್ರಗಳೂ ಪ್ರಮುಖವಾದವು. ಈ ರಾಷ್ಟ್ರಗಳ ನಡುವೆ ಸೌಹಾರ್ದ, ಶಾಂತಿ ಇದ್ದರೆ ಪರಸ್ಪರರ ಹಾಗೂ ಜಗತ್ತಿನ ಹಿತಾಸಕ್ತಿಗಳಿಗೆ ಒಳಿತು’ ಎಂದಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು