ಚೀನಾ | ದೊಡ್ಡ ರಾಕೆಟ್ ಪ್ರಯೋಗಾರ್ಥ ಹಾರಾಟ

ಬೀಜಿಂಗ್: ಚೀನಾದ ಹೊಸ ದೊಡ್ಡ ರಾಕೆಟ್ ಲಾಂಗ್ ಮಾರ್ಚ್–5 ಬಿ ಮಂಗಳವಾರ ಮೊದಲ ಯಶಸ್ವಿ ಹಾರಾಟ ನಡೆಸಿದೆ.
ದೇಶದ ಹೊಸ ತಲೆಮಾರಿನ ಮಾನವ ಸಹಿತ ಆಕಾಶ ನೌಕೆ ಇದಾಗಿದ್ದು, ಕಾರ್ಗೊ ರಿಟರ್ನ್ ಕ್ಯಾಪ್ಸೂಲ್ ಅನ್ನು ಪ್ರಯೋಗಾರ್ಥವಾಗಿ ಆಕಾಶಕ್ಕೆ ಕಳುಹಿಸಲಾಗಿದೆ ಎಂದು ಚೀನಾದ ಅಧಿಕೃತ ಮಾಧ್ಯಮವೊಂದು ವರದಿ ಮಾಡಿದೆ.
ದಕ್ಷಿಣ ಚೀನಾದ ಹೈನಾನ್ ದ್ವೀಪದ ವೆನ್‌ಚಾಂಗ್ ಬಾಹ್ಯಾಕಾಶ ಉಡಾವಣಾ ಕೇಂದ್ರದಲ್ಲಿ ಮಂಗಳವಾರ ಸಂಜೆ 6ಗಂಟೆಗೆ ಬಿಳಿ ಬಣ್ಣದ ದೊಡ್ಡ ರಾಕೆಟ್ ಅನ್ನು ಉಡಾವಣೆ ಮಾಡಲಾಯಿತು ಎಂದು ಚೀನಾದ ಮ್ಯಾನ್ಡ್ ಸ್ಪೇಸ್ ಯೋಜನೆಯ ಮಾಹಿತಿಯನ್ನು (ಸಿಎಂಎಸ್‌ಎ) ಆಧರಿಸಿ ಸರ್ಕಾರದ ಕ್ಸಿನ್ಹುವಾ ಸುದ್ದಿಸಂಸ್ಥೆ ಹೇಳಿದೆ.
ಈ ಯಶಸ್ವಿ ಹಾರಾಟವು ಚೀನಾದ ಮಾನವ ಸಹಿತ ಬಾಹ್ಯಾಕಾಶ ಕಾರ್ಯಕ್ರಮದ ಮೂರನೇ ಹೆಜ್ಜೆಯನ್ನು ಉದ್ಘಾಟಿಸುತ್ತದೆ. ಇದು ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲಿದೆ ಎಂದು ಸಿಎಂಎಸ್‌ಎ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.