ಭಾನುವಾರ, ಫೆಬ್ರವರಿ 23, 2020
19 °C
ಶನಿವಾರ 89 ಮಂದಿ ಸಾವು

ಕೊರೊನಾ ವೈರಸ್‌: ಮೃತರ ಸಂಖ್ಯೆ 811ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್: ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಶನಿವಾರ 89 ಮಂದಿ ಮೃತಪಟ್ಟಿದ್ದು, ಸೋಂಕಿನಿಂದ ಈ ತನಕ ಮೃತಪಟ್ಟವರ ಸಂಖ್ಯೆ 811ಕ್ಕೆ ತಲುಪಿದೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗದ ವರದಿಯಲ್ಲಿದೆ.

ಶನಿವಾರ ಮಧ್ಯರಾತ್ರಿಯವರೆಗೆ 89 ಜನರು ಮೃತರಾಗಿದ್ದು, ಹುಬೈ ಪ್ರಾಂತ್ಯದಲ್ಲಿ 81 ಜನರು ಪ್ರಾಣವನ್ನು ಕಳೆದುಕೊಂಡಿದ್ದು, ಒಟ್ಟು 37,200 ಜನರಿಗೆ ಕೊರೊನಾ ಸೋಂಕು ತಗಲಿದೆ.

ಶನಿವಾರ ಮೃತಪಟ್ಟವರಲ್ಲಿ ಇಬ್ಬರು ವಿದೇಶಿಯರಾಗಿದ್ದು, ಜಪಾನ್ ಮತ್ತು ಫಿಲಿಪಿನ್ಸ್‌ ದೇಶಕ್ಕೆ ಸೇರಿದವರಾಗಿದ್ದಾರೆ ಎಂದು ತಿಳಿದು ಬಂದಿದೆ. 

ವಿಶ್ವದಾದ್ಯಂತ 25ಕ್ಕೂ ಹೆಚ್ಚು ದೇಶಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ, ಕೊರೊನಾ ವೈರಸ್‌ನಿಂದ ಮೃತರಾದವರ ಸಂಖ್ಯೆಯು ಸಾರ್ಸ್‌ ರೋಗಕ್ಕಿಂತಲೂ ಹೆಚ್ಚು. 2002–2003ರಲ್ಲಿ ಕಾಣಿಸಿಕೊಂಡಿದ್ದ ಸಾರ್ಸ್‌ ರೋಗದಲ್ಲಿ 774 ಜನರ ಮೃತರಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು