ಮಂಗಳವಾರ, ಏಪ್ರಿಲ್ 7, 2020
19 °C

ಚೀನಾ: ಕೋವಿಡ್‌ಗೆ ಮತ್ತೆ 7 ಬಲಿ

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಚೀನಾದಲ್ಲಿ ಕೋವಿಡ್‌ಗೆ 7 ಜನರು ಬಲಿಯಾಗಿದ್ದು, ಈ ರೋಗಕ್ಕೆ ಸಾವನ್ನಪ್ಪಿದವರ ಸಂಖ್ಯೆ 3,176ಕ್ಕೆ ಏರಿದಂತಾಗಿದೆ.

ವುಹಾನ್‌ ನಗರವೂ ಸೇರಿದಂತೆ ದೇಶದಾದ್ಯಂತ ಕೊರೊನಾ ಸೋಂಕು ಹರಡುತ್ತಿದ್ದು, ಹೊಸದಾಗಿ 8 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

‘ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಆದರೆ, ಕೋವಿಡ್‌ಅನ್ನು ನಿಯಂತ್ರಿಸುವುದೇ ಈಗ ದೇಶದ ಮುಂದಿರುವ ಕಠಿಣ ಸವಾಲು’ ಎಂದು ಎನ್‌ಎಚ್‌ಸಿ ವಕ್ತಾರ ಮಿ ಫೆಂಗ್‌ ತಿಳಿಸಿದ್ದಾರೆ.

*ನಾರ್ವೆ, ಸುಡಾನ್‌ನಲ್ಲಿ ಕೋವಿಡ್‌ನಿಂದಾಗಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಇದು ಎರಡೂ ಕಡೆಗಳಲ್ಲಿ ಮೊದಲ ಪ್ರಕರಣ.

* ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೊಲ್ಸೊನಾರೊ ಕೂಡ ಕೋವಿಡ್‌–19 ಪೀಡಿತರಾಗಿದ್ದಾರೆ.

* ನೇಪಾಳದಲ್ಲಿ ಎವರೆಸ್ಟ್‌ ಸೇರಿದಂತೆ ವಿವಿಧ ಪರ್ವತಗಳ ಆರೋಹಣ, ಚಾರಣ  ನಿಷೇಧ, ಪ್ರವಾಸಿಗರಿಗೆ ಬಂದಿಳಿದ ನಂತರ ನೀಡುತ್ತಿದ್ದ ವೀಸಾ ಸೌಲಭ್ಯ ಸ್ಥಗಿತ.

ಆಸ್ಟ್ರೇಲಿಯಾ: ಅಮೆರಿಕಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಗೃಹ ಸಚಿವ ಪೀಟರ್‌ ಡಟ್ಟನ್‌ ಅವರಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು, ಬ್ರಿಸ್ಬೇನ್‌ನ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿದ ನಿಗಾ ವಿಭಾಗದಲ್ಲಿ ಚಿಕಿತ್ಸೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು