ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಕೊರೊನಾ ವೈರಸ್‌ ಸೋಂಕು: ಸಾವಿನ ಸಂಖ್ಯೆ 425ಕ್ಕೆ ಏರಿಕೆ

Last Updated 4 ಫೆಬ್ರುವರಿ 2020, 4:56 IST
ಅಕ್ಷರ ಗಾತ್ರ

ಬೀಜಿಂಗ್: ಚೀನಾವಲ್ಲದೆ ಪ್ರಪಂಚದಾದ್ಯಂತ ಭೀತಿಗೆ ಕಾರಣವಾಗಿರುವ ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನಿಂದಾಗಿ ಚೀನಾದಲ್ಲಿ ಮೃತಪಟ್ಟವರ ಸಂಖ್ಯೆ 425ಕ್ಕೆ ಏರಿಕೆಯಾಗಿದೆ.

ಮಂಗಳವಾರ 64 ಹೊಸ ಸಾವು-ನೋವುಗಳನ್ನು ಹುಬೆ ಪ್ರಾಂತ್ಯದ ಅಧಿಕಾರಿಗಳು ವರದಿ ಮಾಡಿದ್ದು, ಸಾವಿನ ಸಂಖ್ಯೆ 425ಕ್ಕೆ ಏರಿಕೆಯಾಗಿದೆ.

ವೈರಸ್‌ನಿಂದಾಗಿ ಹೆಚ್ಚು ಹಾನಿಗೊಳಗಾಗಿರುವ ಹುಬೆಯಲ್ಲಿ 2,345 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕು ತಗುಲುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಎಂದು ಆರೋಗ್ಯ ಆಯೋಗದ ಅಂಕಿ ಅಂಶಗಳು ಬಹಿರಂಗಪಡಿಸಿವೆ.

ಈವರೆಗೆ ಚೀನಾದಲ್ಲಿ ಕೊರೊನಾ ವೈರಸ್ ಸೋಂಕು 19,550 ಪ್ರಕರಣಗಳಲ್ಲಿ ಪತ್ತೆಯಾಗಿದ್ದು, ಈ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಆತಂಕ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಗೆ ಕಾರಣವಾಗಿರುವ ಕೊರೊನಾ ವೈರಸ್ ಸೋಂಕು ಕಳೆದ ಡಿಸೆಂಬರ್‌ನಲ್ಲಿ ಹುಬೆ ಪ್ರಾಂತ್ಯದ ರಾಜಧಾನಿ ವುಹಾನ್‌ನ ಮಾರುಕಟ್ಟೆ ಮಾರಾಟವಾದ ಮಾಂಸದಿಂದ ಹಬ್ಬಿದೆ ಎಂದು ಹೇಳಲಾಗಿದೆ. ಇದೀಗ ಸುಮಾರು 20ಕ್ಕೂ ಹೆಚ್ಚು ದೇಶಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ.

ಚೀನಾದಿಂದ ಹೊರಗೆ ಅಂದರೆ ಫಿಲಿಪ್ಪೀನ್ಸ್‌ನಲ್ಲಿಈಗಾಗಲೇ ಕೊರೊನಾ ವೈರಸ್‌ ವ್ಯಕ್ತಿಯೊಬ್ಬನನ್ನು ಬಲಿಪಡೆದಿದೆ.

ಸೋಂಕು ಹರಡುವುದನ್ನು ತಡೆಯಲು ಚೀನಾದಲ್ಲಿ ಅಧಿಕಾರಿಗಳು ಪರದಾಡುತ್ತಿದ್ದು, ‘ಸದ್ಯ ಚೀನಾಗೆ ತುರ್ತಾಗಿ ರಕ್ಷಣಾ ದಿರಿಸು ಹಾಗೂ ಕನ್ನಡಕಗಳು ಅವಶ್ಯಕವಾಗಿವೆ ಎಂದು ಚೀನಾದ ಸರ್ಕಾರ ತಿಳಿಸಿದೆ.

ಚೀನಾದಲ್ಲಿ ಕೊರೊನಾ ವೈರಸ್​​ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯುಚೀನಾದಲ್ಲಿ ಜಾಗತಿಕ ಆರೋಗ್ಯ ತುರ್ತು ಸ್ಥಿತಿಯನ್ನು ಘೋಷಿಸಿದೆ.

ಮಂಗಳವಾರ 3,235 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ 20,438 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅಮೆರಿಕ, ಜಪಾನ್, ಥಾಯ್ಲೆಂಡ್, ಹಾಂಗ್‌ ಕಾಂಗ್ ಮತ್ತು ಬ್ರಿಟನ್ ಸೇರಿದಂತೆ ಇತರೆ 23 ದೇಶಗಳು ಮತ್ತು ಪ್ರದೇಶಗಳಲ್ಲಿ ಇದುವರೆಗೂ 151 ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT