ಮಂಗಳವಾರ, ಜೂನ್ 2, 2020
27 °C

ಕೋವಿಡ್-19: ಅಮೆರಿಕದಲ್ಲಿ ಒಂದೇ ದಿನ 1,800ಕ್ಕಿಂತಲೂ ಹೆಚ್ಚು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

covid

ವಾಷಿಂಗ್ಟನ್: ಅಮೆರಿಕದಲ್ಲಿ ಮಂಗಳವಾರ 1,800ಕ್ಕಿಂತಲೂ ಹೆಚ್ಚು ಜನರು ಕೋವಿಡ್-19 ರೋಗಕ್ಕೆ ಬಲಿಯಾಗಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಜಾನ್ಸ್ ಹಾಪ್ಕಿನ್ಸ್ ಯುನಿವರ್ಸಿಟಿ ವರದಿ ಪ್ರಕಾರ ಇಲ್ಲಿಯವರೆಗೆ ಅಮೆರಿಕದಲ್ಲಿ ಸರಿಸುಮಾರು 13,000 ಮಂದಿ ಪ್ರಾಣ  ಕಳೆದು ಕೊಂಡಿದ್ದಾರೆ. 398,000 ಜನರಿಗೆ ಕೊರೊನಾ ಸೋಂಕು ಇರುವುದಾಗಿ ದೃಢಪಟ್ಟಿದ್ದು. ಜಗತ್ತಿನಲ್ಲಿ ಅತೀ ಹೆಚ್ಚು ಸೋಂಕಿತರು ಇರುವ ರಾಷ್ಟ್ರವಾಗಿದೆ ಅಮೆರಿಕ.  ಜಗತ್ತಿನಲ್ಲಿ 1.4 ದಶಲಕ್ಷ ಮಂದಿಗೆ ಸೋಂಕು ತಗುಲಿದೆ.

ಅಮೆರಿದ ಗಾಯಕ- ಗೀತ ಸಾಹಿತಿ ಜಾನ್ ಪ್ರೈನ್  ಅವರ ಸಾವು ಕೋವಿಡ್ ರೋಗದಿಂದ ಸಂಭವಿಸಿದೆ ಎಂದು  ಅವರ ಕುಟುಂಬ ಹೇಳಿದೆ. 73ರ ಹರೆಯದ ಪ್ರೈನ್ ಮಂಗಳವಾರ ನಾಶ್‌ವಿಲ್ಲೆಯಲ್ಲಿ ಕೊನೆಯುಸಿರೆಳಿದ್ದಾರೆ. ಪ್ರೈನ್ ಅವರ ಪತ್ನಿಗೂ ಸೋಂಕು ತಗಲಿದ್ದು, ಅವರು ಗುಣಮುಖರಾಗಿದ್ದಾರೆ.

ಕೋವಿಡ್ ರೋಗದಿಂದಾಗಿ ನ್ಯೂಯಾರ್ಕ್‌ನಲ್ಲಿ ಅತೀ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಂಗಳವಾರ ಇಲ್ಲಿ ಸಾವಿಗೀಡಾದವರ ಸಂಖ್ಯೆ 731 ಆಗಿದೆ. ಸೋಂಕು ದೃಢಪಟ್ಟವರ ಸಂಖ್ಯೆ ಈಗ ಇಟಲಿಗಿಂತಲೂ ಜಾಸ್ತಿಯಾಗಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು