ಭಾನುವಾರ, ಜೂಲೈ 5, 2020
27 °C

Covid-19 World Update | ರಷ್ಯಾದಲ್ಲಿ ಕಡಿಮೆಯಾಗುತ್ತಿದೆ ಸಾವಿನ ಸಂಖ್ಯೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Coronavirus

ವಾಷಿಂಗ್ಟನ್: ಅಮೆರಿಕದಲ್ಲಿ ಸೋಮವಾರ 15,342 ಹೊಸ ಪ್ರಕರಣಗಳು ವರದಿಯಾಗಿದ್ದು ಕೊರೊನಾವೈರಸ್ ಸೋಂಕಿತರ ಸಂಖ್ಯೆ 1637456 ಕ್ಕೇರಿದೆ. ಒಂದೇ ದಿನ 620 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 97,669 ಆಗಿದೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ ವರದಿ ಮಾಡಿದೆ.

ರಷ್ಯಾದಲ್ಲಿ ಕೋವಿಡ್-19 ನಿಂದಾಗಿ 3,807 ಮಂದಿ ಸಾವಿಗೀಡಾಗಿದ್ದು, ಪ್ರಕರಣಗಳ ಸಂಖ್ಯೆ 362342ಕ್ಕೇರಿದೆ. ಅಮೆರಿಕ ಮತ್ತು ಬ್ರೆಜಿಲ್ ದೇಶದ ನಂತರ ಅತೀ ಹೆಚ್ಚು ಸೋಂಕಿತರು ಇರುವ ದೇಶವಾಗಿದೆ ರಷ್ಯಾ. 
ಅದೇ ವೇಳೆ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತಿದ್ದು ನಿಧಾನವಾಗಿ ಲಾಕ್‍ಡೌನ್ ಸಡಿಲಿಕೆ ಮಾಡಲಾಗುತ್ತಿದೆ.  ಕಳೆದ 24 ಗಂಟೆಗಳಲ್ಲಿ 8,915 ಹೊಸ ಪ್ರಕರಣಗಳು ದಾಖಲಾಗಿದ್ದು  12,331 ಮಂದಿ ಚೇತರಿಸಿಕೊಂಡಿದ್ದಾರೆ. 174 ಮಂದಿ ಸಾವು

ಕೊರೊನಾ ವೈರಸ್ ಸೊಂಕಿನಿಂದ ಸಾವಿಗೀಡಾದವರ ಸಂಖ್ಯೆ ಅಮೆರಿಕದಲ್ಲಿ ಒಂದು ಲಕ್ಷದ ಸನಿಹ ತಲುಪಿದೆ. ಜಾನ್ಸ್‌ ಹಾಪ್‌ಕಿನ್ಸ್ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ, ಅಮೆರಿಕದಲ್ಲಿ ಈವರೆಗೆ 16.62 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 98,218 ಜನ ಮೃತಪಟ್ಟಿದ್ದಾರೆ.

ಅಮೆರಿಕದಲ್ಲಿ ಕೊರೊನಾದಿಂದಾಗಿ ಮಾರ್ಚ್‌ 1ರಂದು ಮೊದಲ ಸಾವು ಸಂಭವಿಸಿತ್ತು. ಅದಾಗಿ ಕೇವಲ 11 ವಾರಗಳಲ್ಲಿ ಸಾವಿನ ಸಂಖ್ಯೆ ಲಕ್ಷದ ಸನಿಹಕ್ಕೆ ತಲುಪಿದೆ. ಅಮೆರಿಕವು ಇನ್ನೂ ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ಮತ್ತು ಸಾವು ಸಂಭವಿಸಿರುವ ದೇಶವಾಗಿಯೇ ಇದೆ.

ಇದನ್ನೂ ಓದಿ: 

ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ 3.74 ಲಕ್ಷ ದಾಟಿದ್ದು, 23,473 ಜನ ಈವರೆಗೆ ಸಾವಿಗೀಡಾಗಿದ್ದಾರೆ. ಬ್ರಿಟನ್‌ನಲ್ಲಿ 2.62 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, 36,996 ಜನ ಈವರೆಗೆ ಮೃತಪಟ್ಟಿದ್ದಾರೆ.

ಸೊಂಕಿನಿಂದಾಗಿ ಈವರೆಗೆ ಇಟಲಿಯಲ್ಲಿ 32,877, ಫ್ರಾನ್ಸ್‌ನಲ್ಲಿ 28,460, ಸ್ಪೇನ್‌ನಲ್ಲಿ 26,834 ಹಾಗೂ ಜರ್ಮನಿಯಲ್ಲಿ 8,309 ಜನ ಮೃತಪಟ್ಟಿದ್ದಾರೆ. ಅತಿ ಹೆಚ್ಚು ಸೊಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಷ್ಯಾದಲ್ಲಿ ಸೋಮವಾರ ಒಂದೇ ದಿನ 9,000 ಜನರಿಗೆ ಸೋಂಕು ತಗುಲಿತ್ತು. ಅಲ್ಲಿ ಈವರೆಗೆ ಸೋಂಕಿಗೀಡಾದವರ ಸಂಖ್ಯೆ 3.53 ಲಕ್ಷ ದಾಟಿದ್ದು, 3,633 ಜನ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು