ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update: ಸೋಂಕಿತರ ಸಂಖ್ಯೆ 50 ಲಕ್ಷ, 3 ಲಕ್ಷ ಸಾವು

Last Updated 21 ಮೇ 2020, 19:03 IST
ಅಕ್ಷರ ಗಾತ್ರ

ವಿಶ್ವದಲ್ಲಿ ಕೋವಿಡ್‌ಗೆ ತುತ್ತಾದವರ ಸಂಖ್ಯೆ ಗುರುವಾರ 50 ಲಕ್ಷ ದಾಟಿದೆ. ಮೊದಲ ಪ್ರಕರಣ ಪತ್ತೆಯಾಗಿ, 110 ದಿನಗಳ ನಂತರ ಕೋವಿಡ್ ಪೀಡಿತರ ಸಂಖ್ಯೆ 1 ಲಕ್ಷದ ಗಡಿ ಮುಟ್ಟಿತ್ತು. ನಂತರದ ದಿನಗಳಲ್ಲಿ ಸೋಂಕು ವ್ಯಾಪಕವಾಗಿ ಹರಡಿತು. ಸೋಂಕಿತರ ಸಂಖ್ಯೆ 1 ಲಕ್ಷದಿಂದ 10 ಲಕ್ಷ ಆಗಲು 36 ದಿನ ತೆಗೆದುಕೊಂಡಿತ್ತು. ಆನಂತರದ 11–13 ದಿನಗಳಿಗೆ ಒಮ್ಮೆ 10 ಲಕ್ಷ ಹೊಸ ಪ್ರಕರಣಗಳು ಸೇರ್ಪಡೆಯಾಗುತ್ತಾ ಹೋಗಿವೆ

ನ.17 (2019);1

ಮಾ.6;1.01ಲಕ್ಷ

ಏ.2;10.14 ಲಕ್ಷ

ಏ.14;19.99 ಲಕ್ಷ

ಏ.27;30.24 ಲಕ್ಷ

ಮೇ 9;40.24 ಲಕ್ಷ

ಮೇ 21;50.15 ಲಕ್ಷ

*ಮಾರ್ಚ್ ಮೊದಲ ವಾರದಲ್ಲಿ ಚೀನಾ, ಇರಾನ್ ಮತ್ತು ಯೂರೋಪ್‌ನ ಹಲವು ರಾಷ್ಟ್ರಗಳಲ್ಲಿ ಕೊರೊನಾವೈರಸ್ ವ್ಯಾಪಕವಾಗಿ ಹರಡಲು ಆರಂಭಿಸಿತ್ತು. ಅಮೆರಿಕದಲ್ಲೂ ಹಲವು ಪ್ರಕರಣಗಳು ದಾಖಲಾಗಿದ್ದವು. ಇಟಲಿಯಲ್ಲಿ ಸೋಂಕು ಸಮುದಾಯಕ್ಕೆ ಹರಡಿತು. ಈ ವೇಳೆಗೆ 1 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿತು

* ಮಾರ್ಚ್ ಎರಡನೇ ವಾರದಲ್ಲಿಸ್ಪೇನ್, ಜರ್ಮನಿ, ಬ್ರಿಟನ್‌ನಲ್ಲಿ ಸೋಂಕು ಭಾರಿ ಕ್ಷಿಪ್ರವಾಗಿ ಹರಡಲು ಆರಂಭಿಸಿತು. ಅಮೆರಿಕದಲ್ಲೂ ಸೋಂಕು ಹರಡುವಿಕೆ ಕ್ಷಿಪ್ರಗತಿ ಪಡೆಯಿತು

* ಏಪ್ರಿಲ್ 2ರ ಹೊತ್ತಿಗೆ ಒಟ್ಟು ಪ್ರಕರಣಗಳ ಸಂಖ್ಯೆ 10 ಲಕ್ಷ ತಲುಪಿತು. ಈ ವೇಳೆಗೆ ವಿಶ್ವದ 185 ದೇಶಗಳಿಗೆ ಸೋಂಕು ವ್ಯಾಪಿಸಿತು. ಭಾರತದಲ್ಲಿ ಲಾಕ್‌ಡೌನ್ ಹೊರತಾಗಿಯೂ ಸೋಂಕು ವ್ಯಾಪಕವಾಗಿ ಹರಡಲು ಆರಂಭಿಸಿತು. ಟರ್ಕಿ, ಫ್ರಾನ್ಸ್, ಬ್ರಿಟನ್, ಜರ್ಮನಿಗಳಲ್ಲಿ ದಿನೇ ದಿನೇ ಸೋಂಕು ಹೆಚ್ಚಿನ ಜನರಿಗೆ ಹರಡಿತು

* ಏಪ್ರಿಲ್ 2ನೇ ವಾರದ ವೇಳೆಗೆ ಪ್ರತಿದಿನ ಸೋಂಕು ದೃಢಪಡುವವರ ಸಂಖ್ಯೆ ಸ್ಫೋಟಕದ ರೀತಿ ಏರಿಕೆಯಾಯಿತು. ಅಮೆರಿಕ ಒಂದರಲ್ಲೇ ಸೋಂಕು ಪೀಡಿತರ ಸಂಖ್ಯೆ 5 ಲಕ್ಷ ದಾಟಿತು, ಪ್ರತಿದಿನ ಐದಾರು ಪಟ್ಟು ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾದವು

* ಏಪ್ರಿಲ್ ನಾಲ್ಕನೇ ವಾರದ ವೇಳೆಗೆ ಆಫ್ರಿಕಾದ ಎಲ್ಲಾ ದೇಶಗಳಲ್ಲೂ ಸೋಂಕು ವ್ಯಾಪಿಸಿತು. ಆದರೆ, ಇಲ್ಲಿ ತಪಾಸಣೆಗಳ ಸಂಖ್ಯೆ ಕಡಿಮೆ ಇರುವ ಕಾರಣ ಪತ್ತೆಯಾದ ಪ್ರಕರಣಗಳ ಸಂಖ್ಯೆ ಕಡಿಮೆ. ಆದರೆ ಅಮೆರಿಕದಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಏರುತ್ತಲೇ ಹೋಯಿತು

* ಮೇ ಮೊದಲ ವಾರದ ವೇಳೆಗೆ ರಷ್ಯಾದಲ್ಲೂ ಸೋಂಕು ವ್ಯಾಪಕವಾಗಿ ಹರಡಿರುವುದು ಪತ್ತೆಯಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣೆ ನಡೆಸಿದ ಕಾರಣ, ಹೆಚ್ಚು ಪ್ರಕರಣಗಳು ಪತ್ತೆಯಾದವು. ಈವರೆಗೆ ಸೋಂಕು ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಇಲ್ಲದೇ ಇದ್ದ ರಷ್ಯಾ, ಅತಿಹೆಚ್ಚು ಸೋಂಕು ಪೀಡಿತ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಿತು

* ಮೇ ಎರಡನೇ ವಾರದ ಹೊತ್ತಿಗೆ ಲ್ಯಾಟಿನ್ ಅಮೆರಿಕ ಮತ್ತು ದಕ್ಷಿಣ ಅಮೆರಿಕದ ಹಲವು ರಾಷ್ಟ್ರಗಳಲ್ಲೂ ಸೋಂಕು ವ್ಯಾಪಕವಾಗಿ ಹರಡಿರುವುದು ಪತ್ತೆಯಾಯಿತು. ಬ್ರೆಜಿಲ್ ಮತ್ತು ಪೆರು ದೇಶಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾದವು. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯ ನಾಗಾಲೋಟ ಮುಂದುವರಿಯಿತು

* ಮೇ ಮೂರನೇ ವಾರದ ವೇಳೆಗೆ ಭಾರತವೂ ಸೇರಿ ಹಲವು ದೇಶಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಅಮೆರಿಕದಲ್ಲಿ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವೇ ಆಗುತ್ತಿಲ್ಲ. ಜಗತ್ತಿನ ಒಟ್ಟು ಪ್ರಕರಣಗಳಲ್ಲಿ ಶೇ 32ರಷ್ಟು ಪ್ರಕರಣಗಳು ಅಮೆರಿಕದಲ್ಲೇ ಇವೆ

ಹೆಚ್ಚು ಸೊಂಕು ತಗುಲಿರುವ ದೇಶಗಳು

ದೇಶ;ಪ್ರಕರಣಗಳು;ಗುಣಮುಖ;ಸಾವು

ಅಮೆರಿಕ;15.51 ಲಕ್ಷ;2.94 ಲಕ್ಷ;93,439

ರಷ್ಯಾ;3.17 ಲಕ್ಷ;92,681;3,099

ಬ್ರೆಜಿಲ್;2.91 ಲಕ್ಷ;1.16 ಲಕ್ಷ;18,859

ಬ್ರಿಟನ್;2.49 ಲಕ್ಷ;1,116;35,786

ಸ್ಪೇನ್;2.32 ಲಕ್ಷ;1.50 ಲಕ್ಷ;27,888

ಇಟಲಿ;2.27 ಲಕ್ಷ;1.32 ಲಕ್ಷ;32,330

ಫ್ರಾನ್ಸ್;1.81 ಲಕ್ಷ;63,472;28,135

ಜರ್ಮನಿ;1.78 ಲಕ್ಷ;1.57 ಲಕ್ಷ;8,172

ಟರ್ಕಿ;1.52 ಲಕ್ಷ;1.13 ಲಕ್ಷ;4,222

ಇರಾನ್;1.26 ಲಕ್ಷ;98,808;7,183

ಭಾರತ;1.12 ಲಕ್ಷ;45,422;3,438

ಪೆರು;1.04 ಲಕ್ಷ;41,968;3,024

ಅರ್ಧಕ್ಕೂ ಹೆಚ್ಚು ಸಕ್ರಿಯ ಪ್ರಕರಣ

ವಿಶ್ವದಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲಿ ಗುಣಮುಖರಾದವರ ಪ್ರಮಾಣ ಶೇ 38ರಷ್ಟು ಇದೆ. ಕೆಲವು ದೇಶಗಳಲ್ಲಿ ಗುಣಮುಖ ಪ್ರಮಾಣ ಶೇ 50ಕ್ಕಿಂತಲೂ ಅಧಿಕವಾಗಿದೆ. ಕೆಲವು ದೇಶಗಳಲ್ಲಿ ತೀರಾ ಕಡಿಮೆ ಇದೆ. ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ, ಸಾವಿನ ಪ್ರಮಾಣ ಶೇ 6.53ರಷ್ಟು ಇದೆ. ವಿಶ್ವದಲ್ಲಿ ಈವರೆಗೆ ದಾಖಲಾಗಿರುವ ಎಲ್ಲಾ ಕೋವಿಡ್ ಪ್ರಕರಣಗಳಲ್ಲಿ ಶೇ 55.47ರಷ್ಟು ಪ್ರಕರಣಗಳು ಸಕ್ರಿಯವಾಗಿ ಇವೆ.

50.16 ಲಕ್ಷ ಒಟ್ಟು

19.10 ಲಕ್ಷ ಗುಣಮುಖ

3.28 ಲಕ್ಷ ಸಾವು

27.78 ಲಕ್ಷ ಸಕ್ರಿಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT