ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಜತೆ ವ್ಯಾಪಾರ ಒಪ್ಪಂದ ಮಾಡುತ್ತೇವೆ, ಆದರೆ ಈಗ ಅಲ್ಲ: ಡೊನಾಲ್ಡ್ ಟ್ರಂಪ್

Last Updated 19 ಫೆಬ್ರುವರಿ 2020, 7:09 IST
ಅಕ್ಷರ ಗಾತ್ರ

ನವದೆಹಲಿ:ಭಾರತ ಮತ್ತು ಅಮೆರಿಕ ಬೃಹತ್ ವ್ಯಾಪಾರ ಒಪ್ಪಂದದ ಬಗ್ಗೆ ಕಾರ್ಯಪ್ರವೃತ್ತವಾಗಿದೆ. ಆದರೆ ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಅದು ಸಾಧ್ಯವಾಗುತ್ತದೆ ಎಂದು ಹೇಳಲಾಗುವುದಿಲ್ಲ ಎಂದಿದ್ದಾರೆಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್.

ಸೋಮವಾರ ಟ್ರಂಪ್ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಭಾರತದ ಹೈನುಗಾರಿಕೆ ಮತ್ತು ಕೋಳಿ ಸಾಕಣೆ ಮಾರುಕಟ್ಟೆಗಳಿಗೆ ಅಮೆರಿಕಕ್ಕೆ ಪ್ರವೇಶಾಧಿಕಾರ ನೀಡುವ ಮತ್ತು ಇತರ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿಮೆ ಮಾಡುವ ಸೀಮಿತ ಒಪ್ಪಂದವನ್ನು ಒಟ್ಟುಗೂಡಿಸಲು ಸಂಧಾನಕಾರರು ವಾರಗಳಿಂದ ಪ್ರಯತ್ನಿಸುತ್ತಿದ್ದಾರೆ.

ಆದರೆ ಯಾವುದೇ ಮಹತ್ವದ ತಿರುವುಗಳು ಇಲ್ಲಿಯವರೆಗೆ ಘೋಷಿಸಿಲ್ಲ. ಅದೇ ವೇಳೆ ಅಮೆರಿಕದ ವ್ಯವಹಾರ ಪ್ರತಿನಿಧಿ ರಾಬರ್ಟ್ ಲಿಗಿತಿಜರ್ ಅವರ ಪ್ರವಾಸ ರದ್ದಾಗಿದೆ. ಅಂದರೆ ಟ್ರಂಪ್ ಭೇಟಿಗೆ ಮುಂಚಿತವಾಗಿ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡಲು ಎರಡೂ ಕಡೆಯವರು ಪ್ರಯತ್ನಿಸುತ್ತಿದ್ದಾರೆ ಎಂಬುದು ಇಲ್ಲಿ ಎದ್ದು ಕಾಣುತ್ತಿದೆ.

ಭಾರತದೊಂದಿಗೆ ನಾವು ವ್ಯಾಪಾರ ಒಪ್ಪಂದ ಮಾಡಬಹುದು.ಆದರೆ ಈಗ ಅಲ್ಲ, ಅದಕ್ಕೆ ಸಮಯ ಹಿಡಿಯುತ್ತದೆ ಎಂದು ಮಂಗಳವಾರ ಮಾಧ್ಯದವರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದ್ದಾರೆ.

ನಾವು ಭಾರತದೊಂದಿಗೆ ಬೃಹತ್ ವ್ಯಾಪಾರ ಒಪ್ಪಂದವನ್ನು ಮಾಡಲಿದ್ದೇವೆ. ಅದು ಖಂಡಿತಾ. ಆದರೆ ಚುನಾವಣೆಗೆ ಮುನ್ನ ಇದು ಸಾಧ್ಯವೇ ಎಂಬುದು ಗೊತ್ತಿಲ್ಲ.ಆದರೆ ಭಾರತದೊಂದಿಗೆ ಒಪ್ಪಂದ ಮಾಡುತ್ತೇವೆ ಎಂದು ಟ್ರಂಪ್ ಹೇಳಿರುವುದಾಗಿ ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ. ಚೀನಾ ನಂತರ ಭಾರತದೊಂದಿಗೆ ದೊಡ್ಡ ಮಟ್ಟದ ವ್ಯಾಪಾರ ಪಾಲುದಾರಿಕೆ ಹೊಂದಿರುವ ದೇಶವಾಗಿದೆ ಅಮೆರಿಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT