ಗುರುವಾರ , ಏಪ್ರಿಲ್ 2, 2020
19 °C

ದುಬೈ ಒಂಟೆ ಆಸ್ಪತ್ರೆ ಮೇಲ್ದರ್ಜೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುಬೈ: ವಿಶ್ವದ ಮೊದಲ ಒಂಟೆ ಆಸ್ಪತ್ರೆ ಎಂಬ ಶ್ರೇಯಕ್ಕೆ ಪಾತ್ರವಾಗಿರುವ ‘ದುಬೈ ಒಂಟೆ ಆಸ್ಪತ್ರೆ’ಯನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು, ಅದರ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಲಾಗಿದೆ. ‌

ಬೇಡಿಕೆ ಹೆಚ್ಚಾದ ಕಾರಣ ಏಕಕಾಲದಲ್ಲಿ 30 ಒಂಟೆಗಳಿಗೆ ಚಿಕಿತ್ಸೆ ಮತ್ತು ಆರೈಕೆ ನೀಡಲು ಅವಕಾಶ ಸೃಷ್ಟಿಸಲಾಗಿದೆ. ಈ ಆಧುನಿಕ ಸೌಲಭ್ಯಗಳ ಆಸ್ಪತ್ರೆಯನ್ನು 2017ರಲ್ಲಿ ಆರಂಭಿಸಲಾಗಿತ್ತು.   

’ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ದೇಶದ ಪರಂಪರೆಯಲ್ಲಿ ಒಂಟೆಗಳಿಗೆ ಮಹತ್ವದ ಸ್ಥಾನವಿದೆ. ಒಂಟೆಗಳ ರಕ್ಷಣೆ ಮತ್ತು ಹೈನೋದ್ಯಮ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ‍ಪ್ರಗತಿ ಕಂಡಿದೆ’ ಎಂದು ಆಸ್ಪತ್ರೆ ನಿರ್ದೇಶಕ ಮೊಹಮ್ಮದ್‌ ಅಲ್‌ಬ್ಲೂಶಿ ಹೇಳಿದ್ದಾರೆ.  

‘ಮರಳುಗಾಡಿನ ಹಡಗು’ ಎಂಬ ಹೆಸರಿಗೆ ಪಾತ್ರವಾಗಿರುವ ಒಂಟೆಯನ್ನು ಯುಎಇನಲ್ಲಿ ಪ್ರಯಾಣ, ಮಾಂಸ ಮತ್ತು ಹಾಲಿಗಾಗಿ ಸಾಕುತ್ತಾರೆ. ಒಂಟೆ ಸವಾರಿ, ರೇಸ್‌ ಜನಪ್ರಿಯ ಕ್ರೀಡೆಯಾಗಿದೆ. ಒಂಟೆ ಹಾಲಿನಿಂದ ₹ 3,178 ಕೋಟಿ ಆದಾಯವನ್ನು ಯುಎಇ ಗಳಿಸಿದ್ದು, 2024ರ ವೇಳೆಗೆ ಆದಾಯ ದುಪ್ಪಟ್ಟುಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು