ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ಜಾಗತಿಕ 6,34,000 ಪ್ರಕರಣಗಳು, 30,000 ಮಂದಿ ಸಾವು

Last Updated 30 ಮಾರ್ಚ್ 2020, 4:24 IST
ಅಕ್ಷರ ಗಾತ್ರ

ಜಿನೇವಾ: ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1,000 ದಾಟಿದ್ದರೆ, ಜಗತ್ತಿನಾದ್ಯಂತ 6,34,835ಕ್ಕೂ ಅಧಿಕ ಕೋವಿಡ್‌–19 ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದಾಗಿ ಸಾವಿಗೀಡಾದವರ ಸಂಖ್ಯೆ 29,957 ತಲುಪಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.

ಕಳೆದ 24 ಗಂಟೆಗಳಲ್ಲಿ 63,159 ಜನರಲ್ಲಿ ಕೊರೊನಾ ವೈರಸ್‌ ಸೊಂಕು ದೃಢಪಟ್ಟಿದೆ ಹಾಗೂ 3,464 ಮಂದಿ ಮೃತಪಟ್ಟಿದ್ದಾರೆ.

ಭಾನುವಾರದ ಮಾಹಿತಿ ಪ್ರಕಾರ, ಯುರೋಪ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. 3,61,000ಕ್ಕೂ ಅಧಿಕ ಪ್ರಕರಣಗಳು ಯುರೋಪ್‌ ಭಾಗದಲ್ಲಿ ವರದಿಯಾಗಿದ್ದು, ಇಟಲಿ ಒಂದರಲ್ಲಿಯೇ 92,000ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕೋವಿಡ್‌–19 ದೃಢಪಟ್ಟಿದೆ. ಸ್ಪೇನ್‌ನಲ್ಲಿ 72,000, ಜರ್ಮನಿಯಲ್ಲಿ 52,000 ಪ್ರಕರಣಗಳು ದಾಖಲಾಗಿವೆ. ಕೋವಿಡ್‌–19ನಿಂದಾಗಿ ಸಾವಿಗೀಡಾದವರ ಸಂಖ್ಯೆಯಲ್ಲಿಯೂ ಜಗತ್ತಿನಲ್ಲಿಯೇ ಅತಿ ಹೆಚ್ಚು ಇಟಲಿ ಮತ್ತು ಸ್ಪೇನ್‌ನಲ್ಲಿ ವರದಿಯಾಗಿದೆ. ಇಟಲಿಯಲ್ಲಿ 10,023 ಹಾಗೂ ಸ್ಪೇನ್‌ನಲ್ಲಿ 5,690 ಜನರು ಮೃತಪಟ್ಟಿದ್ದಾರೆ.

ಜಗತ್ತಿನಲ್ಲಿ ಅತಿ ಹೆಚ್ಚು ಸೋಂಕಿಗೆ ಒಳಗಾಗಿರುವ ಎರಡನೇ ಪ್ರಾಂತ್ಯ ಅಮೆರಿಕ. ಅಲ್ಲಿ 1,20,000ಕ್ಕೂ ಅಧಿಕ ಪ್ರಕರಣಗಳಲ್ಲಿ ಕೋವಿಡ್‌–19 ದೃಢಪಟ್ಟಿದೆ.

ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್‌–19ನ್ನು ಜಾಗತಿಕ ಸಾಂಗ್ರಾಮಿಕ ರೋಗ ಎಂದು ಮಾರ್ಚ್‌ 11ರಂದು ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT