ವಾಷಿಂಗ್ಟನ್: ಎಚ್1–ಬಿ ವೀಸಾದ ಆನ್ಲೈನ್ ನೋಂದಣಿ ವ್ಯವಸ್ಥೆ ಜಾರಿಗೆ ತರುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ಸಂಸ್ಥೆ (ಯುಎಸ್ಸಿಐಎಸ್) ಘೋಷಿಸಿದೆ.

ಅಮೆರಿಕದ ಕಂಪನಿಗಳು,ವಿದೇಶಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲುಎಚ್1–ಬಿ ವೀಸಾ ಅವಕಾಶ ನೀಡುತ್ತದೆ. ಈ ವೀಸಾಗೆ ಅರ್ಜಿ ಸಲ್ಲಿಸುವವರಲ್ಲಿ ಭಾರತ, ಚೀನಾದ ಐಟಿ ಉದ್ಯೋಗಿಗಳು ಮುಂಚೂಣಿಯಲ್ಲಿರುತ್ತಾರೆ.

‘2021ರ ಆರ್ಥಿಕ ವರ್ಷಕ್ಕೆ ವಿದೇಶಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಬಯಸುವ ಕಂಪನಿ
ಗಳು, ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡು, ಸಂಸ್ಕರಣಾ ಶುಲ್ಕ 10 ಡಾಲರ್ (ಅಂದಾಜು ₹ 712) ಪಾವತಿಸಬೇಕಾಗುತ್ತದೆ. 2020ರ ಏಪ್ರಿಲ್ 1ರಿಂದ ಎಚ್1–ಬಿ ವೀಸಾ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ’ ಎಂದು ಯುಎಸ್ಸಿಐಎಸ್ ತಿಳಿಸಿದೆ.

ಮಾರ್ಚ್ 1ರಿಂದ 20ರವರೆಗೆ ಆರಂಭಿಕ ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತದೆ. ಈ ಅವಧಿ ಸಮೀಪಿಸುತ್ತಿದ್ದಂತೆ, ಅರ್ಜಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವುದು ಹೇಗೆ ಎಂದು ಹಂತಹಂತವಾಗಿ https://www.uscis.gov ವೆಬ್ಸೈಟ್ ಮೂಲಕ ಸೂಚನೆಗಳನ್ನು ನೀಡಲಾಗುತ್ತದೆ.

ಪ್ರಕ್ರಿಯೆ ಸರಳ

‘ಆನ್ಲೈನ್ ನೋಂದಣಿಯಿಂದಾಗಿ ಮಾಹಿತಿ ವಿನಿಮಯ ಪ್ರಕ್ರಿಯೆ ಸರಳವಾಗುತ್ತದೆ. ಹೊಸ ವ್ಯವಸ್ಥೆಯಡಿ ಅರ್ಜಿದಾರ ಕಂಪನಿಗಳು ತಮ್ಮ ಹಾಗೂ ತಾವು ಆಯ್ಕೆ ಮಾಡಿಕೊಳ್ಳಲು ಬಯಸುತ್ತಿರುವ ಉದ್ಯೋಗಿಗಳ ಪ್ರಾಥಮಿಕ ಮಾಹಿತಿ ನೀಡಿದರೆ, ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ’ ಎಂದು ಯುಎಸ್ಸಿಐಎಸ್ ಹೇಳಿದೆ.

‘ಆನ್ಲೈನ್ನಲ್ಲಿ ನೋಂದಾಯಿಸಿಕೊಂಡ ಬಳಿಕ ಆಯ್ಕೆಯಾದವರಷ್ಟೆ ಅಂತಿಮವಾಗಿ ಪೂರ್ಣ ಮಾಹಿತಿ ನೀಡಬೇಕಾಗುತ್ತದೆ. ಇದರಿಂದ ವೆಚ್ಚ ಉಳಿತಾಯವಾಗುತ್ತದೆ’ ಎಂದು ಯುಎಸ್ಸಿಐಎಸ್ ಉಪ ನಿರ್ದೇಶಕ ಮಾರ್ಕ್ ಕೌಮನ್ಸ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.