ಶನಿವಾರ, ಜುಲೈ 24, 2021
22 °C

ಹಾಂಗ್‌ಕಾಂಗ್‌: ಡಿಸ್ನಿಲ್ಯಾಂಡ್‌ 18ರಿಂದ ಪುನರಾರಂಭ

ಎಪಿ Updated:

ಅಕ್ಷರ ಗಾತ್ರ : | |

ಕೊರೊನಾ ಸೋಂಕು ಭೀತಿ ಕಾರಣ ಹಾಂಕಾಂಗ್‌ ಡಿಸ್ನಿಲ್ಯಾಂಡ್‌ ಜನವರಿಯಿಂದ ಮುಚ್ಚಲಾಗಿತ್ತು.

ಹಾಂಗ್‌ಕಾಂಗ್‌: ಇಲ್ಲಿನ ಡಿಸ್ನಿಲ್ಯಾಂಡ್‌ ಈ ತಿಂಗಳ 18ರಿಂದ ಸಾರ್ವಜನಿಕರ ಪ್ರವೇಶಕ್ಕೆ ಮತ್ತೆ ಮುಕ್ತವಾಗಲಿದೆ.

ಕೊರೊನಾ ಸೋಂಕು ಭೀತಿ ಕಾರಣ ಇದನ್ನು ಜನವರಿಯಿಂದ ಮುಚ್ಚಲಾಗಿತ್ತು. ಆದರೆ ಈಗ ಆರ್ಥಿಕ ಚಟುವಟಿಕೆಗಳು ಮತ್ತೆ ನಿಧಾನವಾಗಿ ಶುರುವಾಗಿರುವ ಹಿನ್ನೆಲೆಯಲ್ಲಿ ಈ ಮನರಂಜನಾ ತಾಣವನ್ನು ಪುನರಾರಂಭಿಸಲಾಗುತ್ತಿದೆ.

ಪ್ರವೇಶಿಗರ ಸಂಖ್ಯೆಗೆ ಮಿತಿ ಇರುತ್ತದೆ ಅಲ್ಲದೆ ಅಂತರವನ್ನೂ ಕಾಯ್ದುಕೊಳ್ಳಲಾಗುತ್ತದೆ. ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದ ಕೆಲವು ಚಟುವಟಿಕೆಗಳು ಬಂದ್‌ ಆಗಿರುತ್ತವೆ. ಇಲ್ಲಿನ ಪಾರ್ಕ್‌ಗೆ ಭೇಟಿ ನೀಡುವ ಪ್ರವಾಸಿಗರು ಕೂಡ ಮುಖಗವಸು ಹಾಕಿರಬೇಕು ಎಂದು ಡಿಸ್ನಿಲ್ಯಾಂಡ್‌ ಪ್ರಕಟಣೆ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು