ಭಾನುವಾರ, ಮಾರ್ಚ್ 26, 2023
31 °C
ಮಸೂದೆ ವಿರೋಧಿಸಿ ರ್‍ಯಾಲಿ

ಹಾಂಗ್‌ಕಾಂಗ್‌: ಸಂಸತ್‌ನಲ್ಲಿ ಪ್ರತಿಭಟನಕಾರರ ದಾಂದಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಂಗ್‌ಕಾಂಗ್‌(ಎಎಫ್‌ಪಿ): ಬ್ರಿಟಿಷರ ವಸಹತು ಆಗಿದ್ದ ಹಾಂಗ್‌ಕಾಂಗ್‌ ಅನ್ನು ಚೀನಾಕ್ಕೆ ಹಸ್ತಾಂತರಿಸಿದ 22ನೇ ವರ್ಷಾಚರಣೆಯ ಅಂಗವಾಗಿ ಸೋಮವಾರ ಇಲ್ಲಿ ನಡೆದ ರ್‍ಯಾಲಿಯ ವೇಳೆ ಕೆಲ ಪ್ರತಿಭಟನಕಾರರು ಸಂಸತ್‌ ಕಟ್ಟಡದೊಳಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. 

ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಪೆಪ್ಪರ್‌ ಸ್ಫ್ರೇ ಪ್ರಯೋಗಿಸಿದ್ದಾರೆ. ಪೊಲೀಸರ ಜತೆಗಿನ ಘರ್ಷಣೆ ಬಳಿಕ ಒಳನುಗ್ಗಿದ ಪ್ರತಿಭಟನಕಾರರು ನಗರದ ನಾಯಕರ ಭಾವಚಿತ್ರಗಳನ್ನು ಹರಿದು ಹಾಕಿದರು.  

ಶಂಕಿತ ಅಪರಾಧಿಗಳನ್ನು ವಿಚಾರಣೆಗಾಗಿ ಚೀನಾ ಮೇನ್‌ಲ್ಯಾಂಡ್‌ಗೆ ಹಸ್ತಾಂತರಿಸುವ ವಿವಾದಾತ್ಮಕ ಮಸೂದೆ ವಿರೋಧಿಸಿ  ಕಳೆದ ಮೂರು ವಾರಗಳಿಂದ ಇಲ್ಲಿ ಪ್ರತಿಭಟನೆ ನಡೆಯುತ್ತಿದೆ. ಹಸ್ತಾಂತರ ವರ್ಷಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಹಾಂಗ್‌ಕಾಂಗ್‌ ನಾಯಕಿ ಕ್ಯಾರಿ ಲ್ಯಾಮ್‌, ಸಾರ್ವಜನಿಕರ ಭಾವನೆಗಳಿಗೆ ಹೆಚ್ಚು ಸ್ಪಂದಿಸುವುದಾಗಿ ಪ್ರತಿಜ್ಞೆ ಮಾಡಿದರು.

’ಈಚೆಗೆ ನಡೆಯುತ್ತಿರುವ ಪ್ರತಿಭಟನೆಗಳು ಸಾವಿರಾರು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ. ಜನರ ಭಾವನೆಗಳನ್ನು ಇನ್ನಷ್ಟು ಅರಿತುಕೊಳ್ಳುವ ಅಗತ್ಯವಿದೆ ಎಂಬುದನ್ನು ಇದರಿಂದ ಮನಗಂಡಿದ್ದೇನೆ‘ ಎಂದೂ ಅವರು ಹೇಳಿದ್ದಾರೆ. ‘ಪ್ರತಿಭಟನೆಗಳಿಂದ ನಾನು ಪಾಠ ಕಲಿತಿದ್ದೇನೆ. ಮುಂದಿನ ದಿನಗಳಲ್ಲಿ ಸರ್ಕಾರ ಜನರಿಗೆ ನಿಕಟವಾಗಿ ಕಾರ್ಯ ನಿರ್ವಹಿಸಲಿದೆ’ ಎಂದು ಕ್ಯಾರಿ ತಿಳಿಸಿದ್ದಾರೆ. ಕ್ಯಾರಿ ಲ್ಯಾಮ್‌ ರಾಜೀನಾಮೆ ನೀಡಬೇಕು ಮತ್ತು ಮಸೂದೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದ ಸಂಸದೆ ಹೆಲೆನಾ ವಾಂಗ್‌ ಅವರನ್ನು ಭದ್ರತಾ ಸಿಬ್ಬಂದಿ ಹೊರಕ್ಕೆ ಕಳುಹಿಸಿದರು. ಜನರ ಪ್ರತಿಭಟನೆಯ ಕಾರಣ ಮಸೂದೆ ಕುರಿತ ಚರ್ಚೆಯನ್ನು ಸರ್ಕಾರ ಕೈಬಿಟ್ಟಿದೆ. ಆದರೆ ಪ್ರತಿಭಟನಕಾರರು, ಕ್ಯಾರಿ ಲ್ಯಾಮ್‌ ರಾಜೀನಾಮೆ ನೀಡಬೇಕು ಎಂದು ಪಟ್ಟುಹಿಡಿದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು