ವಾಷಿಂಗ್ಟನ್ : ‘ಕೊರೊನಾ ಸೋಂಕು ತಡೆಗಟ್ಟಲುಹೈಡ್ರಾಕ್ಸಿಕ್ಲೊರೊಕ್ವಿನ್ (ಎಚ್‌ಸಿಕ್ಯೂ) ಔಷಧ ರಕ್ಷಾ ಕವಚದಂತೆ ಕೆಲಸ ಮಾಡುತ್ತದೆ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಆ ಮೂಲಕ, ಮಲೇರಿಯಾ ನಿಯಂತ್ರಣಕ್ಕೆ ಬಳಸುವ ಈ ಔಷಧವನ್ನು ಕೊರೊನಾ ನಿಯಂತ್ರಣಕ್ಕೆ ಬಳಸುತ್ತಿರುವುದನ್ನು ಅವರು ಸರ್ಮಥಿಸಿಕೊಂಡಿದ್ದಾರೆ.

ಕೊರೊನಾ ಸೋಂಕು ತಗುಲದಂತೆ ನಿತ್ಯವೂ ಒಂದು ಹೈಡ್ರಾಕ್ಸಿಕ್ಲೊರೋಕ್ವಿನ್ ಮಾತ್ರೆ ತೆಗೆದುಕೊಳ್ಳುತ್ತಿರುವ ಮಾಹಿತಿಯನ್ನು ಟ್ರಂಪ್ ಬಹಿರಂಗಪಡಿಸಿರುವ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ.

‘ನಾನು ಈ ಔಷಧಿಗೆ ಪ್ರಚಾರ ನೀಡುತ್ತಿದ್ದೇನೆ ಎಂಬ ಕಾರಣದಿಂದ ಇದರ ಕುರಿತು ಅಪಪ್ರಚಾರ ನಡೆಸಲಾಗುತ್ತಿದೆ. ನಾನ್ನೊಬ್ಬ ಕಳಪೆ ಪ್ರಚಾರಕ. ನನ್ನನ್ನು ಹೊರತಾಗಿ ಬೇರೆಯವರು ಪ್ರಚಾರ ಮಾಡಿದ್ದರೆ, ಈ ಔಷಧಿಗೆ ಖ್ಯಾತಿ ಬರುತ್ತಿತ್ತು’ ಎಂದಿದ್ದಾರೆ.

‘ಇದೊಂದು ಪರಿಣಾಮಕಾರಿ ಔಷಧ. ಇದನ್ನು ತೆಗೆದುಕೊಳ್ಳುವುದರಿಂದ ಅಡ್ಡ ಪರಿಣಾಮ ಆಗುವುದಿಲ್ಲ’ ಎಂದು ಹೇಳಿದ್ದಾರೆ.

‘ಶ್ವೇತಭವನದ ವೈದ್ಯರ ಜೊತೆ ಸಮಲೋಚನೆ ನಡೆಸಿ ಈ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದೇನೆ. ನನ್ನ ವೈಯಕ್ತಿಕ ವೈದ್ಯರೂ ಇದನ್ನು ಶಿಫಾರಸು ಮಾಡಿದ್ದರು. ಇಟಲಿ, ಸ್ಪೇನ್, ಫ್ರಾನ್ಸ್‌ನಲ್ಲಿ ಈ ಔಷಧದ ಮೇಲೆ ಹಲವು ಅಧ್ಯಯನಗಳು ನಡೆದಿವೆ. ಅಲ್ಲಿಯ ವೈದ್ಯರು ಈ ಔಷಧಿಯ ಕುರಿತು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.