ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಕಾಪಾಡುವುದಾಗಿ ಪ್ರಮಾಣ ಮಾಡಿದ್ದೇನೆ; ಅದನ್ನೇ ಮಾಡುತ್ತೇನೆ: ಟ್ರಂಪ್

Last Updated 2 ಜೂನ್ 2020, 4:34 IST
ಅಕ್ಷರ ಗಾತ್ರ

ವಾಷಿಂಗ್ಟನ್: ದೇಶದಾದ್ಯಂತ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ಪ್ರಕರಣಗಳನ್ನುದ್ದೇಶಿಸಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ತಾವು ಪ್ರಮಾಣ ಮಾಡಿರುವಂತೆಯೇದೇಶದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದಾಗಿ ಹೇಳಿಕೊಂಡಿದ್ದಾರೆ.

ಟ್ರಂಪ್‌ ಅವರು ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಶ್ವೇತ ಭವನದ ಹತ್ತಿರ ರಕ್ಷಣಾ ಪಡೆಗಳು ಹಾಗೂ ಪ್ರತಿಭಟನಾ ನಿರತರ ನಡುವೆ ಘರ್ಷಣೆ ನಡೆಯಿತು. ಈ ವೇಳೆ, ಶಾಂತಿ ಕಾಪಾಡಲು ಸಾವಿರಾರು ಸೈನಿಕರನ್ನು ನಿಯೋಜಿಸುವುದಾಗಿ ಟ್ರಂಪ್‌ಎಚ್ಚರಿಕೆ ನೀಡಿದರು.

‘ನನ್ನ ಅಮೆರಿಕನ್ನರೇ, ಅಧ್ಯಕ್ಷನಾಗಿ ನನ್ನ ಮೊದಲ ಮತ್ತು ಅತ್ಯುನ್ನತ ಕರ್ತವ್ಯವೆಂದರೆ, ನಮ್ಮ ಮಹಾನ್ ದೇಶ ಮತ್ತು ಅಮೇರಿಕನ್ನರನ್ನು ರಕ್ಷಿಸುವುದು. ನಮ್ಮ ರಾಷ್ಟ್ರದ ಕಾನೂನುಗಳನ್ನು ಎತ್ತಿಹಿಡಿಯುವುದಾಗಿ ನಾನು ಪ್ರಮಾಣ ಮಾಡಿದ್ದೇನೆ ಮತ್ತು ಅದನ್ನೇ ನಾನು ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.

ಆಫ್ರಿಕಾ ಮೂಲದ ಅಮೆರಿಕನ್‌ ಪ್ರಜೆ, ಜಾರ್ಜ್‌ ಫ್ಲಾಯ್ಡ್‌ ಅವರು ಪೊಲೀಸ್‌ ಕಸ್ಟಡಿಯಲ್ಲಿ ಮೃತಪಟ್ಟಿರುವುದನ್ನು ಖಂಡಿಸಿ ಆರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯು ಭಾನುವಾರ ಹಿಂಸಾಚಾರಕ್ಕೆ ತಿರುಗಿತ್ತು.

ಫ್ಲಾಯ್ಡ್‌ ಕುಟುಂಬಕ್ಕೆ ನ್ಯಾಯ ಒದಗಿಸಲು ತಮ್ಮ ಆಡಳಿತ ಬದ್ಧವಾಗಿರುವುದಾಗಿಯೂ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT