ಸೋಮವಾರ, ಮೇ 17, 2021
23 °C
ಪ್ರವಾಸಕ್ಕೆಂದು ಐರ್ಲೆಂಡ್‌ಗೆ ತೆರಳಿದ್ದ ಕುಟುಂಬ

ಐರ್ಲೆಂಡ್‌: ಭಾರತೀಯ ಕುಟುಂಬಕ್ಕೆ ಜನಾಂಗೀಯ ನಿಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌: ಪ್ರವಾಸಕ್ಕೆಂದು ಐರ್ಲೆಂಡ್‌ಗೆ ತೆರಳಿದ್ದ ಭಾರತೀಯ ಕುಟುಂಬದ ಸದಸ್ಯರನ್ನು ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಜನಾಂಗೀಯ ನಿಂದನೆಗೈದಿದ್ದಾನೆ.

ಪ್ರಸುನ್‌ ಭಟ್ಟಚಾರ್ಜಿ ತಮ್ಮ ಕುಟುಂಬದೊಂದಿಗೆ ಮೂರು ದಿನಗಳ ಪ್ರವಾಸಕ್ಕೆ ಐರ್ಲೆಂಡಿಗೆ ತೆರಳಿದ್ದರು. ಬೆಲ್‌ಫಾಸ್ಟ್‌ನಿಂದ ಡಬ್ಲಿನ್‌ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಸಹ ಪ್ರಯಾಣಿಕ ಇವರ ಮಾತಿನ ಶೈಲಿ, ಚರ್ಮದ ಬಣ್ಣ, ರಾಷ್ಟ್ರೀಯತೆಯ ವಿಷಯ ತೆಗೆದು ನಿಂದನೆಗೈದಿದ್ದಾನೆ ಎಂದು ಐರಿಷ್‌ ಟೈಮ್ಸ್‌ ವರದಿ ಮಾಡಿದೆ.

‘ಬೋಗಿಗೆ ರೈಲ್ವೆ ಭದ್ರತಾ ಸಿಬ್ಬಂದಿ ಬಂದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ’ ಎಂದು ಪ್ರಸುನ್ ತಿಳಿಸಿದ್ದಾರೆ.  ‘ಆರೋಪಿ ಪತ್ತೆಗಾಗಿ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪೊಲೀಸರಿಗೆ ನೀಡಿದ್ದೇವೆ' ಎಂದು ಐರಿಷ್‌ ರೈಲ್ವೆ ವಕ್ತಾರ ಬ್ಯಾರಿ ಕೆನ್ನಿ ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು