ಭಾನುವಾರ, ಜುಲೈ 25, 2021
25 °C

ಭಾರತ ಸಂಜಾತ ಕರಣ್‌ ಬಿಲಿಮೊರಿಯಾ ಬ್ರಿಟಿಷ್‌ ಕೈಗಾರಿಕಾ ಮಹಾಒಕ್ಕೂಟ ಅಧ್ಯಕ್ಷ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಭಾರತ ಸಂಜಾತ ಉದ್ಯಮಿ ಲಾರ್ಡ್‌ ಕರಣ್‌ ಬಿಲಿಮೊರಿಯಾ ಅವರು ಕಾನ್ಫಡರೇಷನ್‌ ಆಫ್‌ ಬ್ರಿಟಿಷ್‌ ಇಂಡಸ್ಟ್ರಿ (ಬ್ರಿಟಿಷ್‌ ಕೈಗಾರಿಕಾ ಮಹಾಒಕ್ಕೂಟ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

ಈ ಮಹಾಒಕ್ಕೂಟದ ಸದಸ್ಯರ ಸಂಖ್ಯೆ 1.90 ಲಕ್ಷ. ಕರಣ್‌ ಅವರು ಯುಕೆ–ಇಂಡಿಯಾ ಬಿಸಿನೆಸ್‌ ಕೌನ್ಸಿಲ್‌ನ ಸಂಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. 

58 ವರ್ಷದ ಕರಣ್‌, ಕೋಬ್ರಾ ಬಿಯರ್ ಕಂಪನಿಯ ಸಂಸ್ಥಾಪಕರಾಗಿದ್ದು, ಕಳೆದ ವರ್ಷ ಮಹಾಒಕ್ಕೂಟದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮಂಗಳವಾರ ನಡೆದ ಸಾಮಾನ್ಯಸಭೆಯಲ್ಲಿ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.

 ‘ಸಂಕಷ್ಟದ ಸಮಯದಲ್ಲಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದು, ಬ್ರಿಟನ್‌ನ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಮೊದಲ ಆದ್ಯತೆ. ಮಹಾಒಕ್ಕೂಟದ ನಿರ್ದೇಶಕ ಮಂಡಳಿಯಲ್ಲಿ ಕಪ್ಪುವರ್ಣೀಯರು, ಏಷ್ಯಾ ಮೂಲದವರು ಹಾಗೂ ಅಲ್ಪಸಂಖ್ಯಾತರಾಗಿರುವ ಇಲ್ಲಿನ ಮೂಲ ನಿವಾಸಿ ಉದ್ಯಮಿಗಳಿಗೆ ಪ್ರಾತಿನಿಧ್ಯ ನೀಡುವುದು ನನ್ನ ಗುರಿ’ ಎಂದರು ಕರಣ್‌ ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು