ಗುರುವಾರ , ಜನವರಿ 30, 2020
19 °C
ಇರಾನ್ ಸಂಸತ್‌ನಲ್ಲಿ ಮಸೂದೆಗೆ ಅನುಮೋದನೆ

ಸುಲೇಮಾನಿ ಹತ್ಯೆಗೆ ಆದೇಶಿಸಿದ ಅಮೆರಿಕ ಪಡೆಗಳು ಭಯೋತ್ಪಾದಕರು: ಇರಾನ್‌ ಘೋಷಣೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಟೆಹರಾನ್‌: ಅಮೆರಿಕದ ಎಲ್ಲಾ ಪಡೆಗಳನ್ನು ‘ಭಯೋತ್ಪಾದಕರು’ ಎಂದು ಘೋಷಿಸಿ ಮಸೂದೆಯೊಂದನ್ನು ಇರಾನ್‌ ಸಂಸತ್‌ನಲ್ಲಿ ಮಂಗಳವಾರ ಮಂಡಿಸಲಾಗಿದ್ದು, ಅನುಮೋದನೆ ದೊರೆತಿದೆ.

ಈ ಮಸೂದೆ ಅಡಿಯಲ್ಲಿ ಅಮೆರಿಕದ ಎಲ್ಲಾ ಪಡೆಗಳು, ರಕ್ಷಣಾ ಸಚಿವಾಲಯ ಮತ್ತು ಅದರ ಅಂಗಸಂಸ್ಥೆಗಳು, ಕಮಾಂಡರ್‌ಗಳು ಹಾಗೂ ಸುಲೇಮಾನಿ ಹತ್ಯೆಗೆ ಆದೇಶಿಸಿದವರನ್ನು ಭಯೋತ್ಪಾದಕರು ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: 

‘ಈ ಪಡೆಗಳಿಗೆ ಸೇನೆ, ಗುಪ್ತಚರ, ಹಣಕಾಸು, ತಾಂತ್ರಿಕ ಸೇವೆ ಸೇರಿದಂತೆ ಯಾವುದೇ ಸಹಾಯ ಮಾಡುವವರನ್ನು ಭಯೋತ್ಪಾದಕ ಕಾಯ್ದೆ ಅಡಿಯಲ್ಲಿ ಪರಿಗಣಿಸಲಾಗುವುದು’ ಎಂದು ಸಂಸತ್‌ ತಿಳಿಸಿದೆ. 

ರೆವಲ್ಯೂಷನರಿ ಗಾರ್ಡ್ಸ್‌ ಅನ್ನು ಭಯೋತ್ಫಾದಕ ಸಂಘಟನೆ ಎಂದು ಅಮೆರಿಕ ಘೋಷಿಸಿ ಕಪ್ಪು ಪಟ್ಟಿಗೆ ಸೇರಿಸಿದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇರಾನ್‌ನ ಉನ್ನತ ಮಟ್ಟದ ರಾಷ್ಟ್ರೀಯ ಭದ್ರತಾ ಮಂಡಳಿ ಹೇಳಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು