ಶುಕ್ರವಾರ, ಜನವರಿ 24, 2020
17 °C

ಲಂಡನ್‌ ದಾಳಿ: ಹೊಣೆ ಹೊತ್ತ ಐಎಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌: ಲಂಡನ್‌ ಬ್ರಿಡ್ಜ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹೊಣೆಯನ್ನು ಐಎಸ್‌ ಉಗ್ರ ಸಂಘಟನೆ ಹೊತ್ತುಕೊಂಡಿದೆ.

ಉಗ್ರ ಉಸ್ಮಾನ್‌ ಖಾನ್‌ ಎಂಬಾತ ಶುಕ್ರವಾರ ರಾತ್ರಿ ಚಾಕುವಿನಿಂದ ಇರಿದು ಇಬ್ಬರನ್ನು ಹತ್ಯೆ ಮಾಡಿದ್ದ. ಅನಂತರ ಪೊಲೀಸರು ಆತನನ್ನು ಹೊಡೆದುರುಳಿಸಿದ್ದರು.

‘ನಾಗರಿಕರನ್ನು ಗುರಿಯಾಗಿಸಿ ಐಎಸ್‌ ಹೋರಾಟಗಾರ ಈ ದಾಳಿ ನಡೆಸಿದ್ದಾನೆ’ ಎಂದು ಸಂಘಟನೆಗೆ ಸಂಬಂಧಿಸಿದಂತೆ ಅಧಿಕೃತವಾಗಿ ಸುದ್ದಿ ಪ್ರಸಾರ ಮಾಡುವ ‘ಅಮಾಕ್‌ ನ್ಯೂಸ್‌ ಏಜೆನ್ಸಿ’ ವರದಿ ಮಾಡಿದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದಕ್ಕೆ ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ.

ಅಲ್‌ ಕೈದಾ ಜೊತೆಗೂ ಉಸ್ಮಾನ್‌ಗೆ ನಂಟು ಇತ್ತು ಎಂಬುದನ್ನು ಈ ಹಿಂದೆ ಅಧಿಕಾರಿಗಳು ಹೇಳಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು