ಸೋಮವಾರ, ಏಪ್ರಿಲ್ 19, 2021
31 °C

ಇಸ್ಲಾಮಾಬಾದ್- ಭಾರತೀಯ ಇಫ್ತಾರ್ ಕೂಟಕ್ಕೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್: ಭಾರತೀಯ ರಾಯಭಾರ ಕಚೇರಿ ವತಿಯಿಂದ ಇಲ್ಲಿನ ಖಾಸಗಿ ಹೋಟೆಲ್‌‌ನಲ್ಲಿ ಏರ್ಪಡಿಸಿದ್ದ ಇಫ್ತಾರ್ ಕೂಟಕ್ಕೆ ಮುತ್ತಿಗೆ ಹಾಕಿದ ಪಾಕಿಸ್ತಾನದ ಕೆಲ ಸಂಘಟನೆಗಳ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಸೇರಿದ್ದ ಅತಿಥಿಗಳು ಹಾಗೂ ಅಧಿಕಾರಿಗಳಿಗೆ ಪ್ರಾಣಬೆದರಿಕೆ ಹಾಕಿ ಹೊರಗೆ ಕಳುಹಿಸಿದ ಘಟನೆ ನಡೆದಿದೆ.

ಶನಿವಾರ ರಾತ್ರಿ ಇಲ್ಲಿನ ಹೋಟೆಲ್ ಸೆರೆನಾದಲ್ಲಿ ಈ ಘಟನೆ ನಡೆದಿದೆ. ಭಾರತದ ರಾಯಭಾರಿ ಅಜಯ್ ಬಿಸರಿಯಾ ಅವರು ಇಫ್ತಾರ್ ಕೂಟವನ್ನು ಏರ್ಪಡಿಸಿದ್ದರು. ಅಲ್ಲದೆ, ಪಾಕಿಸ್ತಾನದ ಪ್ರಜೆಗಳೂ, ಭಾರತೀಯ ಮೂಲದವರನ್ನೂ ಅತಿಥಿಗಳನ್ನಾಗಿ ಆಹ್ವಾನಿಸಲಾಗಿತ್ತು. ಈ ಸಮಯದಲ್ಲಿ ಬಂದ ಕೆಲ ಕಾರ್ಯಕರ್ತರು ಅತಿಥಿಗಳಿಗೆ ಬೆದರಿಕೆ ಹಾಕಿ, ಇಲ್ಲಿಂದ ಜಾಗ ಖಾಲಿ ಮಾಡುವಂತೆ ಹೇಳಿ ಬಲವಂತವಾಗಿ ಹೋಟೆಲ್‌‌ನಿಂದ ಕಳುಹಿಸಿದ್ದಾರೆ.

ಈ ಸಂಬಂಧ ಮಾಧ್ಯಮದ ಜೊತೆ ಮಾತನಾಡಿದ ಇಸ್ಲಾಮಾಬಾದ್‌‌ನಲ್ಲಿರುವ ಭಾರತದ ರಾಯಭಾರಿ ಅಜಯ್ ಬಿಸಾರಿಯಾ, ಇದು ರಾಜತಾಂತ್ರಿಕ ನಡಾವಳಿಗಳ ಉಲ್ಲಂಘನೆ ಅಷ್ಟೇ ಅಲ್ಲ, ಅನಾಗರಿಕ ವರ್ತನೆಯಾಗಿದೆ. ಈ ಘಟನೆಯಿಂದಾಗಿ ನಮ್ಮ ದ್ವಿಪಕ್ಷೀಯ ಸಂಬಂಧಕ್ಕೆ ಪ್ರತಿರೋಧ ವ್ಯಕ್ತಪಡಿಸಿದಂತಾಗಿದೆ ಎಂದಿದ್ದಾರೆ. ಅಲ್ಲದೆ, ಆಹ್ವಾನಿತ ಅತಿಥಿಗಳಲ್ಲಿ ಕ್ಷಮೆಯಾಚಿಸಿ, ಅಹಿತಕರ ಘಟನೆಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು