ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿಯರ ಅಕ್ರಮ ಸಾಗಾಟದ ಆರೋಪಿ, ಅಮೆರಿಕದ ಸಿರಿವಂತ ಜೆಫ್ರಿ ಜೈಲಿನಲ್ಲೇ ಆತ್ಮಹತ್ಯೆ

Last Updated 10 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಎಎಫ್‌ಪಿ): ಅಮೆರಿಕದ ಖ್ಯಾತ ಶ್ರೀಮಂತ ಜೆಫ್ರಿ ಎಪ್‌ಸ್ಟೈನ್‌ ಇಲ್ಲಿನ ಕಾರಾಗೃಹದಲ್ಲೇ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಲೈಂಗಿಕ ವೃತ್ತಿಗೆ ಬಾಲಕಿಯರನ್ನು ಅಕ್ರಮವಾಗಿ ಸಾಗಿಸಿದ ಆರೋಪಕ್ಕಾಗಿ ಜೆಫ್ರಿಯನ್ನು ಬಂಧಿಸಲಾಗಿತ್ತು. ಕಾರಾಗೃಹದ ಸೆಲ್‌ನಲ್ಲಿ ನೇಣು ಹಾಕಿಕೊಂಡು ಜೆಫ್ರಿ(66) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ತಿಂಗಳು ಸಹ ಜೆಫ್ರಿ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಜೆಫ್ರಿ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಸ್ಕೃತಗೊಂಡಿತ್ತು.

ಜೆಫ್ರಿ ವಿರುದ್ಧ ಆರೋಪ ಸಾಬೀತಾದರೆ 45 ವರ್ಷಗಳ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಅಂದರೆ, ಬಹುತೇಕ ಜೀವ ಇರುವವರೆಗೂ ಶಿಕ್ಷೆ ನೀಡಲಾಗಿತ್ತು. ನ್ಯೂಜೆರ್ಸಿಯಲ್ಲಿ ಜುಲೈ 6ರಂದು ಅವರನ್ನು ಬಂಧಿಸಲಾಗಿತ್ತು.

ನ್ಯೂಯಾರ್ಕ್‌ನಲ್ಲಿ ಜನಿಸಿದ ಜೆಫ್ರಿ ಮೊದಲು ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ, ಹಣಕಾಸು ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೇರಿದಂತೆ ಹಲವು ಮಾಜಿ ಅಧ್ಯಕ್ಷರು, ರಾಜಕಾರಣಿಗಳು, ಸೆಲೆಬ್ರಿಟಿಗಳ ಜತೆ ಅವರು ಸಂಪರ್ಕ ಹೊಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT