ಕೊಲಂಬೊ: ಸರಣಿ ಬಾಂಬ್ ಸ್ಫೋಟದಲ್ಲಿ ಕಾಸರಗೋಡು ನಿವಾಸಿ ಸಾವು

ಸೋಮವಾರ, ಮೇ 27, 2019
24 °C

ಕೊಲಂಬೊ: ಸರಣಿ ಬಾಂಬ್ ಸ್ಫೋಟದಲ್ಲಿ ಕಾಸರಗೋಡು ನಿವಾಸಿ ಸಾವು

Published:
Updated:

ಕೊಲಂಬೊ: ಭಾನುವಾರ ಬೆಳಗ್ಗೆ ಈಸ್ಟರ್ ಹಬ್ಬದಾಚರಣೆ ವೇಳೆ ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ ಎಂದು ಮಲಯಾಳ ಮನೋರಮ ಪತ್ರಿಕೆ ವರದಿ ಮಾಡಿದೆ.

ಸಾವಿಗೀಡಾದ ಮಹಿಳೆ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ನಿವಾಸಿ ಪಿ.ಎಸ್. ರಸೀನಾ (58) ಎಂದು ಗುರುತಿಸಲಾಗಿದೆ.
ಪತಿ ಜತೆ ಕೊಲಂಬೊಗೆ ಪ್ರವಾಸ ಹೋಗಿದ್ದ ರಸೀನಾ ಶಾಂಗ್ರಿಲಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಹೋಟೆಲ್‌ನಿಂದ ಚೆಕ್‍ಔಟ್ ಮಾಡಿ ಹೊರಗೆ ಬರುವ ಹೊತ್ತಿಗೆ ಬಾಂಬ್ ಸ್ಫೋಟ ಸಂಭವಿಸಿದೆ.

ಇದನ್ನೂ ಓದಿ:  ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ: 156 ಸಾವು, 35 ಮಂದಿ ಹೊರ ರಾಷ್ಟ್ರದವರು

ಮೃತದೇಹ ರಸೀನಾಳದ್ದೇ ಎಂದು ಆಕೆಯ ಸಹೋದರ ಪತ್ತೆ ಹಚ್ಚಿದ್ದಾರೆ. ಮೃತದೇಹದ ಅಂತ್ಯ ಸಂಸ್ಕಾರದ ಬಗ್ಗೆ ಅಥವಾ ಮೃತದೇಹವನ್ನು ಊರಿಗೆ ಕರೆ ತರುವುದರ ಬಗ್ಗೆ ಸದ್ಯ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಶ್ರೀಲಂಕಾದ ಏಳು ಪ್ರದೇಶಗಳಲ್ಲಿ ಭಾನುವಾರ ಬಾಂಬ್ ಸ್ಫೋಟ ಸಂಭವಿಸಿದೆ.

ಇದನ್ನೂ ಓದಿ: ಶ್ರೀಲಂಕಾದಲ್ಲಿ ಮತ್ತೊಂದು ಬಾಂಬ್ ಸ್ಫೋಟ: 2 ಸಾವು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !