ಶನಿವಾರ, ಫೆಬ್ರವರಿ 22, 2020
19 °C

ಈ ಡೇಟಿಂಗ್‌ ಆ್ಯಪ್‌ನಲ್ಲಿರುವುದು ಒಬ್ಬನೇ ಪುರುಷ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಇಂಟರ್‌ನೆಟ್‌ನಲ್ಲಿ ಅಸಂಖ್ಯಾತ ಡೇಟಿಂಗ್‌ ಆ್ಯಪ್‌ಗಳು ಇವೆ. ಸಾಕಷ್ಟು ಪ್ರಖ್ಯಾತಿ ಪಡೆಯುತ್ತಿರುವ ಈ ಡೇಟಿಂಗ್ ಆ್ಯಪ್‌ಗಳನ್ನು ಬಹಳಸುವವರ ಸಂಖ್ಯೆ ಬಹಳಷ್ಟಿದೆ. ಒಂದು ಹುಡುಗಿಯ ಹಿಂದೆ ಕನಿಷ್ಠ ಹತ್ತಿಪ್ಪತ್ತು ಹುಡುಗರು ಇರುತ್ತಾರೆ. ಹೀಗೆ ಹೆಚ್ಚಿನ ಯುವಕರ ಸಂಖ್ಯೆಯಿಂದ ಬೇಸತ್ತ ಅಮೆರಿಕದ ಅರೋನ್ ಸ್ಮಿತ್‌ ಎಂಬಾತ ತನಗಾಗಿಯೇ ಪ್ರತ್ಯೇಕ ಡೇಟಿಂಗ್‌ ಆ್ಯಪ್‌ ರೂಪಿಸಿಕೊಂಡಿದ್ದಾನೆ.

ಈ ಆ್ಯಪ್‌ನಲ್ಲಿರುವುದು ಅವನೊಬ್ಬ ಮಾತ್ರ. ಅಲ್ಲಿ ಯಾವುದೇ ಪುರುಷರಿಗೂ ನೋಂದಾಯಿಸಿಕೊಳ್ಳಲು ಅನುಮತಿ ನೀಡಿಲ್ಲ.

ಕೆಲವು ಟೆಕ್ಕಿ ಗೆಳೆಯರ ಸಹಾಯದಿಂದ ಸ್ಮಿತ್‌ ಈ ಆ್ಯಪ್‌ ಅನ್ನು ಅಭಿವೃದ್ಧಿ ಪಡಿಸಿರುವುದಾಗಿ 7news.com.au ವರದಿ ಮಾಡಿದೆ. ಈ ಆ್ಯಪ್‌ಗೆ ಸಿಂಗ್ಯುಲ್ಯರಿಟಿ (Singularity) ಎಂದು ಹೆಸರಿಟ್ಟಿದ್ದಾನೆ. ಈ ಡೇಟಿಂಗ್‌ ಆ್ಯಪ್‌ನಲ್ಲಿ ಹುಡುಕುವವರಿಗೆ ಸ್ಮಿತ್‌ನ ಪ್ರೊಫೈಲ್‌ ಮತ್ತು ಪೋಟೊ ಮಾತ್ರ ಕಾಣುತ್ತದೆ. 

ಹೀಗೆ ತನಗಾಗಿ ಅಭಿವೃದ್ಧಿಪಡಿಸಿಕೊಂಡಿರುವ ಈ ಡೇಟಿಂಗ್‌ ಆ್ಯಪ್‌ನಿಂದ ಸ್ಮಿತ್‌ ಇಲ್ಲಿಯವರೆಗೂ ಯಾವುದೇ ಹುಡುಗಿಯ ಜೊತೆ ಡೇಟ್‌ ಮಾಡಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು