ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಾಜ್ ಷರೀಫ್ ಪುತ್ರಿ ಮರಿಯಂ ನವಾಜ್‌ಗೆ ವಿದೇಶ ಪ್ರಯಾಣ ನಿರಾಕರಣೆ

Last Updated 24 ಡಿಸೆಂಬರ್ 2019, 2:02 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಪುತ್ರಿ ಮರಿಯಂ ನವಾಜ್‌ ಅವರಿಗೆ ವಿದೇಶಕ್ಕೆ ಪ್ರಯಾಣಿಸಲು ಪಾಕಿಸ್ತಾನ ಸರ್ಕಾರ ಅನುಮತಿ ನಿರಾಕರಿಸಿದೆ.

ಆರ್ಥಿಕ ಅಪರಾಧಗಳಲ್ಲಿ ಭಾಗಿಯಾದವರಿಗೆ ದೇಶದಿಂದ ಹೊರಹೋಗಲು ಅವಕಾಶ ನೀಡಲಾಗುವುದಿಲ್ಲ ಎಂದು ಪಾಕ್ ಸರ್ಕಾರ ಹೇಳಿರುವುದಾಗಿ ‘ಡಾನ್‌ ನ್ಯೂಸ್‌’ ಸೋಮವಾರ ವರದಿ ಮಾಡಿದೆ.

ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಂದೆಯನ್ನು ಭೇಟಿ ಮಾಡಲು ಅವಕಾಶ ನೀಡಬೇಕೆಂದು ಮರಿಯಂ ಮನವಿ ಸಲ್ಲಿಸಿದ್ದರು. ಕಾನೂನು ಸಚಿವರ ನೇತೃತ್ವದ ಉಪಸಮಿತಿ ಇದನ್ನು ತಿರಸ್ಕರಿಸಿದೆ.

ಪಿಎಂಎಲ್–ಎನ್‌ ಉಪಾಧ್ಯಕ್ಷೆಯೂ ಆಗಿರುವ ಮರಿಯಂ ಭ್ರಷ್ಟಾಚಾರ ಪ್ರಕರಣ
ದಲ್ಲಿ ಆರೋಪಿಯಾಗಿದ್ದಾರೆ. 2018ರ ಆಗಸ್ಟ್‌ನಿಂದ ಅವರನ್ನು ‘ವಿದೇಶ ಪ್ರಯಾಣ ನಿರ್ಬಂಧ’ ಪಟ್ಟಿಯಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT