ಬುಧವಾರ, ಜನವರಿ 22, 2020
17 °C

ಮೆಲ್ಬರ್ನ್‌: ಹದಗೆಟ್ಟ ವಾಯು ಗುಣಮಟ್ಟ

ಪಿಟಿಐ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್‌ : ‘ವಿನಾಶಕಾರಿ ಕಾಳ್ಗಿಚ್ಚಿನಿಂದ ಮೆಲ್ಬರ್ನ್‌ನಲ್ಲಿ ವಾಯು ಗುಣಮಟ್ಟ ತೀರ ಹದಗೆಟ್ಟಿದ್ದು, ವಿಶ್ವದಲ್ಲಿಯೇ ಅತಿ ಕಳಪೆ ಮಟ್ಟಕ್ಕೆ ತಲುಪಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ರಾತ್ರೋರಾತ್ರಿ ವಾಯು ಗುಣಮಟ್ಟ ಕುಸಿದಿದೆ. ಆರೋಗ್ಯದ ದೃಷ್ಟಿಯಿಂದ ಜನರು ಮನೆಯ ಒಳಗೆ ಇರುವುದರ ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಎಚ್ಚರಿಸಲಾಗಿದೆ. 

ಇತಿಹಾಸದಲ್ಲಿಯೇ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ತೀವ್ರತರದಲ್ಲಿ ಕಾಳ್ಗಿಚ್ಚು ವ್ಯಾಪಿಸಿದ್ದು, 26 ಜನರು ಮೃತಪಟ್ಟಿದ್ದರು. ಅಂದಾಜು 2 ಸಾವಿರ ಮನೆಗಳು ಹಾನಿಗೊಂಡಿವೆ. 

ಮಳೆ ಸಾಧ್ಯತೆ: ಇದೇ ಮಂಗಳವಾರದಿಂದ ಭಾನುವಾರದವರೆಗೆ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದು ಕಾಳ್ಗಿಚ್ಚು ವ್ಯಾಪಿಸಿದ ಪ್ರದೇಶಗಳ ಜನರಿಗೆ ತುಸು ನೆಮ್ಮದಿ ತಂದಿದೆ. 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು