ಶನಿವಾರ, ಜುಲೈ 31, 2021
28 °C

ಎನ್‌ಆರ್‌ಸಿ ಆಂತರಿಕ ವಿಷಯ: ಶ್ರಿಂಗ್ಲಾ ಭರವಸೆ

ಪಿಟಿಐ Updated:

ಅಕ್ಷರ ಗಾತ್ರ : | |

ಢಾಕಾ: ಬಾಂಗ್ಲಾದೇಶದ ಪ್ರಜೆಗಳ ಮೇಲೆ ಎನ್‌ಆರ್‌ಸಿ ಪರಿಣಾಮ ಬೀರುವುದಿಲ್ಲ. ಎನ್‌ಆರ್‌ಸಿ ಪ್ರಕ್ರಿಯೆ ಸಂಪೂರ್ಣ ಆಂತರಿಕ ವಿಷಯ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್‌ ಶ್ರಿಂಗ್ಲಾ ಭರವಸೆ ನೀಡಿದ್ದಾರೆ. 

ಸೋಮವಾರ ಢಾಕಾದಲ್ಲಿ ನಡೆದ ‘ಬಾಂಗ್ಲಾದೇಶ ಮತ್ತು ಭಾರತ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಈವರೆಗೆ ಭಾರತ–ಬಾಂಗ್ಲಾದೇಶದ ಗಡಿ ವಿವಾದ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಪ್ರಬುದ್ಧತೆ, ಸೌಜನ್ಯತೆಯಿಂದ ಬಗೆಹರಿಸಿಕೊಳ್ಳಲಾಗುತ್ತಿದೆ ಎಂದರು. 

ಎನ್‌ಆರ್‌ಸಿ ಆಂತರಿಕ ವಿಷಯ ಎಂದು ಬಾಂಗ್ಲಾದೇಶಕ್ಕೆ ಭಾರತ ಭರವಸೆ ನೀಡಿದ್ದರೂ, ಎನ್‌ಆರ್‌ಸಿ ಬಗ್ಗೆ ಬಾಂಗ್ಲಾದೇಶ ಅಸಮಾಧಾನ ವ್ಯಕ್ತಪಡಿಸಿತ್ತು. ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ ಅಬ್ದುಲ್‌ ಮೊಮೆನ್‌ ಹಾಗೂ ಗೃಹ ಸಚಿವ ಅಸಾದುಜ್ಜಾಮಾನ್‌ಖಾನ್‌ ಅವರು ಡಿಸೆಂಬರ್‌ನಲ್ಲಿ ಭಾರತದ ಭೇಟಿಯನ್ನು ರದ್ದುಗೊಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು