ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಿಣಿ ಪತ್ನಿಯನ್ನು ಕೇರಳಕ್ಕೆ ಕಳುಹಿಸಿ,ಮಗು ಹುಟ್ಟುವ ಮುನ್ನವೇ ಕಣ್ಮುಚ್ಚಿದ ಪತಿ

ದುಬೈನಲ್ಲಿ ಕೋವಿಡ್‌–19 ಪೀಡಿತರ ನೆರವಿಗೆ ನಿಂತಿದ್ದ ನಿತಿನ್ ಚಂದ್ರನ್
Last Updated 9 ಜೂನ್ 2020, 16:52 IST
ಅಕ್ಷರ ಗಾತ್ರ

ತಿರುವನಂತಪುರ: ಲಾಕ್‌ಡೌನ್ ವೇಳೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸಿಲುಕಿದ್ದವರನ್ನು ಸ್ವದೇಶಕ್ಕೆ ಕರೆತರಲು ಕಾನೂನು ಹೋರಾಟದ ನಡೆಸಿ ಯಶಸ್ವಿಯಾಗಿದ್ದಕೇರಳದ ಮಹಿಳೆ ಆದಿರಾ, ತಮ್ಮ ಪತಿ ಮೃತಪಟ್ಟ ಒಂದು ದಿನದ ಬಳಿಕ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

ಕೇರಳದ ಕೊಯಿಕ್ಕೋಡ್‌ನವರಾದ ಆದಿರಾಜಿ.ಎಸ್‌. ಅವರು ಭಾರತೀಯರು ಸ್ವದೇಶಕ್ಕೆ ಮರಳಲು ವಿಮಾನ ವ್ಯವಸ್ಥೆ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಮೇ 7ರಂದು ಆದಿರದುಬೈನಿಂದ ‘ವಂದೇ ಭಾರತ’ ಮಿಷನ್‌ನಡಿ ಮೊದಲ ವಿಮಾನದಲ್ಲಿ ಭಾರತಕ್ಕೆ ಬಂದಿದ್ದರು. ‌ಆದರೆ, ಆದಿರಾಅವರ ಪತಿ ನಿತಿನ್ ಚಂದ್ರನ್ (28) ದುಬೈನಲ್ಲೇ ಉಳಿದು ಕೋವಿಡ್‌–19 ಪೀಡಿತರ ಸಹಾಯದಲ್ಲಿ ತೊಡಗಿಕೊಂಡಿದ್ದರು.

ದುಬೈನಲ್ಲಿ ಸೋಮವಾರ ಬೆಳಿಗ್ಗೆ ತಮ್ಮ ಮನೆಯಲ್ಲೇ ನಿತಿನ್ ಚಂದ್ರನ್‌ ಶವವಾಗಿ ಪತ್ತೆಯಾಗಿದ್ದಾರೆ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ಇತ್ತ ಪತಿಯ ಸಾವಿನ ಸುದ್ದಿ ತಿಳಿಯದ ಆದಿರಾ, ಮಂಗಳವಾರ ಬೆಳಿಗ್ಗೆ ಕೊಯಿಕ್ಕೋಡ್‌ನಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

ಆದಿರಾ ಜತೆ ವಿಮಾನದಲ್ಲಿ ಕೇರಳಕ್ಕೆ ಮರಳುವ ಅವಕಾಶವಿದ್ದರೂ ನಿತಿನ್, ತಮ್ಮ ಬದಲಿಗೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಇಬ್ಬರನ್ನು ವಿಮಾನದಲ್ಲಿ ಭಾರತಕ್ಕೆ ಕಳುಹಿಸಿಕೊಟ್ಟಿದ್ದರು. ಅವರಿಬ್ಬರ ವಿಮಾನದ ವೆಚ್ಚವನ್ನೂ ನಿತಿನ್ ಅವರೇ ಭರಿಸಿದ್ದರು.

ನಿತಿನ್ಯುಎಇನಲ್ಲಿ ನಿರ್ಮಾಣ ಕ್ಷೇತ್ರವೊಂದರಲ್ಲಿ ಎಂಜಿನಿಯರ್ ಆಗಿ, ಆತಿರಾ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ನಿತಿನ್ ಯುಎಇಯ ಭಾರತೀಯ ಸಂಸ್ಕೃತಿ ಮತ್ತು ಕಲಾ ಸಮಾಜದ ಸಕ್ರಿಯ ಸದಸ್ಯರಾಗಿದ್ದರಲ್ಲದೇ, ರಕ್ತದಾನ ಗುಂಪುಗಳಲ್ಲಿಯೂ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT