ಗುರುವಾರ , ಏಪ್ರಿಲ್ 9, 2020
19 °C

ಅಮೆರಿಕದಲ್ಲಿ ಕೊರೊನಾ ಸೋಂಕಿಗೆ 452 ಬಲಿ; ಸೋಂಕು ತಗಲಿದವರ ಸಂಖ್ಯೆ 34,717

ಪಿಟಿಐ Updated:

ಅಕ್ಷರ ಗಾತ್ರ : | |

Corona

ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಸೋಂಕಿಗೆ ಬಲಿಯಾದವರ ಸಂಖ್ಯೆ 452ಕ್ಕೇರಿದೆ. ಕೋವಿಡ್-19 ರೋಗ ಬಾಧಿತರ ಮಾಹಿತಿ ಪ್ರಕಟಿಸುವ ವರ್ಲ್ಡೊಮೀಟರ್ ಎಂಬ ವೆಬ್‌ಸೈಟ್ ಪ್ರಕಾರ ಭಾನುವಾರ ಸಂಜೆ ಕೆಂಟುಕಿಯ ರಿಪಬ್ಲಿಕನ್ ಸೆನೆಟರ್ ರಾಂಡ್ ಪೌಲ್ ಸೇರಿದಂತೆ 34,717 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 178 ಮಂದಿ ಗುಣ ಮುಖರಾಗಿದ್ದಾರೆ.

ಸೋಂಕು ದೃಢಪಟ್ಟ ಮೊದಲ ಸೆನೆಟರ್ ಪೌಲ್ ಆಗಿದ್ದು ಈಗ ಕ್ವಾರೆಂಟೈನ್‌ನಲ್ಲಿದ್ದಾರೆ.

ಆದಾಗ್ಯೂ,ಶ್ವೇತ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನ್ಯೂಯಾರ್ಕ್ ,ಕ್ಯಾಲಿಫೋರ್ನಿಯಾ ಮತ್ತ  ವಾಷಿಂಗ್ಟನ್‌ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಜಾಸ್ತಿ ಇದೆ ಎಂದಿದ್ದಾರೆ.

ನ್ಯೂಯಾರ್ಕ್‌ನಲ್ಲಿ  15,000ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿದ್ದು , ಕಳೆದ 24 ಗಂಟೆಗಳಲ್ಲಿ  5,418ಹೊಸ ಪ್ರಕರಣಗಳು ದಾಖಲಾಗಿವೆ. ನ್ಯೂಯಾರ್ಕ್‌ನಲ್ಲಿ  114 ಜನರು ಸಾವಿಗೀಡಾಗಿದ್ದು ಒಂದು ದಿನದಲ್ಲಿ 58 ಪ್ರಕರಣಗಳು ವರದಿಯಾಗಿವೆ.

ಮುಂದಿನ 10 ದಿನಗಳಲ್ಲಿ ನ್ಯೂಯಾರ್ಕ್‌ನಲ್ಲಿ  ಅಗತ್ಯ ವೈದ್ಯಕೀಯ ವಸ್ತುಗಳ ಪೂರೈಕೆಗೂ ಹೊಡೆತ ಬೀಳಲಿದೆ ಎಂದು ಮೇಯರ್ ಬಿಲ್ ಡೇ ಬ್ಲಸಿಯೊ ಹೇಳಿದ್ದಾರೆ.

10 ದಿನಗಳಲ್ಲಿ ವೈದ್ಯಕೀಯ ವಸ್ತುಗಳ ಪೂರೈಕೆ ಕುಂಠಿತವಾಗಲಿದೆ. ನಮಗೆ ಹೆಚ್ಚಿನ ಸಂಖ್ಯೆಯಲ್ಲಿ ವೆಂಟಿಲೇಟರ್ ಸಿಗದೇ ಇದ್ದರೆ ಜನರು ಸಾಯುತ್ತಾರೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು