ಟ್ರಸ್ಟ್‌ಗಳಿಂದ ಉಗ್ರರಿಗೆ ಹಣ:ಮುಂಬೈ ದಾಳಿ ರೂವಾರಿ ಹಫೀಸ್‌ ವಿರುದ್ಧ ಪಾಕ್‌ ಕೇಸ್‌

ಶುಕ್ರವಾರ, ಜೂಲೈ 19, 2019
23 °C

ಟ್ರಸ್ಟ್‌ಗಳಿಂದ ಉಗ್ರರಿಗೆ ಹಣ:ಮುಂಬೈ ದಾಳಿ ರೂವಾರಿ ಹಫೀಸ್‌ ವಿರುದ್ಧ ಪಾಕ್‌ ಕೇಸ್‌

Published:
Updated:

ಲಾಹೋರ್‌: ಭಯೋತ್ಪಾದನಾ ಸಂಘಟನೆಗಳಿಗೆ ಪೂರೈಕೆಯಾಗುತ್ತಿರುವ ಹಣಕಾಸು ನೆರವನ್ನು ನಿರ್ಬಂಧಿಸುವಂತೆ ಜಾಗತಿಕವಾಗಿ ಕೇಳಿ ಬರುತ್ತಿರುವ ಒತ್ತಾಯಕ್ಕೆ ಮಣಿದಿರುವ ಪಾಕಿಸ್ತಾನ, 26/11ರ ಮುಂಬೈ ದಾಳಿ ರೂವಾರಿ, ‘ಜಮಾತ್‌ ಉದ್‌ ದವಾ’ (ಜೆಯುಡಿ) ಸಂಘಟನೆಯ ಹಫೀಸ್‌ ಸಯೀದ್ ಸೇರಿದಂತೆ ಆತನ 12 ಸಹಚರರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. 

ಭಯೋತ್ಪಾದನಾ ಸಂಘಟನೆಗಳಿಗೆ ಮತ್ತು ಉಗ್ರಗಾಮಿಗಳಿಗೆ ಹಣ ಪೂರೈಕೆ ಮಾಡುತ್ತಿರುವ ಆರೋಪದ ಅಡಿ ಹಫೀಸ್‌ ಸಯೀದ್‌ ವಿರುದ್ಧ ಪಾಕಿಸ್ತಾನದ ಉಗ್ರ ನಿಗ್ರಹ ವಿಭಾಗ (ಸಿಟಿಡಿ) 23 ಪ್ರಕರಣ ದಾಖಲಿಸಿದೆ. 

ಈ ಕುರಿತು ಪ್ರಕಟಣೆ ನೀಡಿರುವ ಸಿಟಿಡಿ, ‘ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡುವ ಸಲುವಾಗಿಯೇ ಜೆಯುಡಿ ಮುಖ್ಯಸ್ಥ ಹಫೀಸ್‌ ಸಯೀದ್‌ ಐದು ಟ್ರಸ್ಟ್‌ಗಳನ್ನು ರಚಿಸಿದ್ದಾನೆ. ಅದರ ಮೂಲಕ ಹಣ ಸಂಗ್ರಹಿಸಿ ಆರ್ಥಿಕ ನೆರವು ನೀಡುತ್ತಿದ್ದ. ಇದೇ ಕಾರಣಕ್ಕಾಗಿಯೇ ಹಫೀಸ್‌ ಸಯೀದ್‌ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಆಸ್ತಿ ಗಳಿಕೆ ಬಗ್ಗೆ ನಾವು ತನಿಖೆ ಮಾಡಲಿದ್ದೇವೆ,’ ಎಂದು ತಿಳಿಸಿದೆ. ‌

‘ಅಲ್‌–ಅನ್ಫಾಲ್‌’, ‘ದವಾತ್‌ ಉಲ್‌ ಈರ್ಷದ್‌’, ‘ಮೌಜ್‌ ಬಿನ್‌ ಜಬಾಲ್‌’, ‘ಅಲ್‌ ಹಮಾದ್‌’, ‘ಅಲ್‌ ಮದೀನಾ ಫೌಂಡೇಷನ್‌’ ಮೂಲಕ ಆಸ್ತಿ ಗಳಿಸಿ, ಅವುಗಳ ಮೂಲಕ ಹಫೀಸ್‌ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುತ್ತಿದ್ದ. ಈ ಸಂಬಂಧ ಲಾಹೋರ್‌, ಗುಜರನ್‌ವಾಲಾ ಮತ್ತು ಮುಲ್ತಾನ್‌ಗಳಲ್ಲಿ ಜೆಯುಡಿ ಮುಖ್ಯಸ್ಥ ಹಫೀಸ್‌, ಲಷ್ಕರ್‌ ಎ ತೋಯ್ಬಾ ಮತ್ತು ಫಲ್ಹಾ ಇ ಇನ್ಸಾಯಿತ್‌ ಸಂಘಟನೆಯ ಮುಖ್ಯಸ್ಥರ ಮೇಲೆ 23 ಪ್ರಕರಣ ದಾಖಲಾಗಿದೆ.  

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !