ಗುರುವಾರ , ಏಪ್ರಿಲ್ 9, 2020
19 °C

ಪಾಕಿಸ್ತಾನದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 453ಕ್ಕೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

pakistan

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ  ಕೊರೊನಾ ಸೋಂಕು ತಗಲಿದವರ ಸಂಖ್ಯೆ 453 ಕ್ಕೆ ಏರಿದೆ ಎಂದು ಹೇಳಿರುವ ಸೇನಾಪಡೆ  ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದೆ.

ಬುಧವಾರ ಪಾಕಿಸ್ತಾನದಲ್ಲಿ ಎರಡು ಮಂದಿ ಸಾವಿಗೀಡಾಗಿದ್ದರು. ಗುರುವಾರ ಸೋಂಕು ತಗಲಿದವರ ಸಂಖ್ಯೆ ಧುತ್ತನೆ ಏರಿಕೆಯಾಗಿದೆ. ಬಲೂಚಿಸ್ತಾನದಲ್ಲಿ ಒಂದೇ ದಿನ ಪ್ರಕರಣಗಳ ಸಂಖ್ಯೆ 23 ರಿಂದ 81ಕ್ಕೇರಿದೆ. ಪಂಜಾಬ್‌ನಲ್ಲಿ ಪ್ರಕರಣಗಳ ಸಂಖ್ಯೆ 33ರಿಂದ  78 ಕ್ಕೇರಿದೆ ಎಂದು ಪಾಕ್  ವರದಿ ಮಾಡಿದೆ.

ಸಿಂಧ್ ಪ್ರಾಂತ್ಯದಲ್ಲಿ   245 ಪ್ರಕರಣಗಳು ವರದಿಯಾಗಿದ್ದು ಖೈಬೆರ್- ಪಖತುನ್ಖವಾದಲ್ಲಿ -23, ಇಸ್ಲಾಮಾಬಾದ್ -2 ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಬಿಟ್- ಬಲ್ತೀಸ್ತಾನದಲ್ಲಿ 24 ಪ್ರಕರಣಗಳು ವರದಿಯಾಗಿವೆ.

ಕೊರೊನಾ ವೈರಸ್ ಸೋಂಕು ವಿರುದ್ಧ ಹೋರಾಡಲು  ಸ್ಥಳೀಯ ಆಡಳಿತ ಸಂಸ್ಥೆಗಳಿಗ  ನೆರವು ನೀಡಲು  ಸೇನೆ ಸಿದ್ಧವಾಗಿದೆ ಎಂದು ಸೇನಾ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತೀಕರ್ ಹೇಳಿದ್ದಾರೆ .

 ತುರ್ತು ಪರಿಸ್ಥಿಯಲ್ಲಿ ಸಶಸ್ತ್ರ ಪಡೆಯ  ವೈದ್ಯಕೀಯ ಸಹಾಯ ನೀಡಲಿದೆ ಎಂದು ಅವರು ಹೇಳಿದ್ದಾರೆ.

ಎರಡು ವಾರಗಳ ಕಾಲ ವಾಘಾ ಗಡಿ ಮುಚ್ಚುವುದಾಗಿ ಪಾಕಿಸ್ತಾನ ಗುರುವಾರ ಹೇಳಿದ್ದು, ಗಡಿ ಮುಚ್ಚಿದೆ.

ಭಾರತದೊಂದಿಗಿರುವ ಗಡಿ ಪ್ರದೇಶವನ್ನು 14 ದಿನಗಳ ವರೆಗೆ ಮುಚ್ಚಲಾಗುವುದು ಎಂದು ಅಲ್ಲಿನ ಗೃಹ ಸಚಿವಾಲಯ ಹೇಳಿದೆ. ಎರಡೂ ದೇಶಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನವು  ಈಗಾಗಲೇ ಇರಾನ್ ಮತ್ತು ಅಫ್ಗಾನಿಸ್ತಾನದ ಜತೆಗಿರುವ ಗಡಿಭಾಗವನ್ನು ಮುಚ್ಚಿದೆ.ಸೋಂಕು ಹರಡದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು  ಪ್ರಧಾನಿಯ ಸಲಹೆಗಾರ (ಆರೋಗ್ಯ) ಡಾ. ಜಾಫರ್ ಮಿರ್ಜಾ ಹೇಳಿದ್ದಾರೆ.

ಚೀನಾದ ಅನುಭವದಿಂದ ನಾವು ಕಲಿಯಬೇಕಿದೆ. ವಿಡಿಯೊ ಕಾನ್ಫರೆನ್ಸ್ ಮೂಲಕ ಚೀನಾದ ವೈದ್ಯರು ನಮ್ಮ ವೈದ್ಯರಿಗೆ ತರಬೇತಿ ನೀಡಿದ್ದರು ಎಂದು ಅವರು ಹೇಳಿದ್ದಾರೆ.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು