ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಂಗ್ ಕಾಂಗ್‌ನಲ್ಲಿ ಮಾಲೀಕನಿಂದ ಸಾಕು ನಾಯಿಗೂ ಬಂದ ಕೊವಿಡ್ 19 ಸೋಂಕು

Last Updated 5 ಮಾರ್ಚ್ 2020, 8:45 IST
ಅಕ್ಷರ ಗಾತ್ರ

ಹಾಂಗ್ಕಾಂಗ್: ಸಾಕು ನಾಯಿಗೆ ತನ್ನ ಮಾಲೀಕನಿಂದಕೊರೊನಾವೈರಸ್ಸೋಂಕು ಹರಡಿದ್ದು,ಇದುಮನುಷ್ಯರಿಂದ ಪ್ರಾಣಿಗಳಿಗೆ ಹರಡಿದ ಮೊದಲ ಪ್ರಕರಣ ಎಂದು ಹಾಂಗ್ ಕಾಂಗ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ನಾಯಿ ಮರಿಯನ್ನು ಪ್ರಾಣಿ ಕೇಂದ್ರದ ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗಿದೆ. ನಾಯಿಯು 60 ವರ್ಷ ಪ್ರಾಯದ ಮಹಿಳೆಗೆ ಸೇರಿದ್ದು ಅವರೂ ಕೊರೊನಾವೈರಸ್ ನಿಂದ ಬಳಲುತ್ತಿರುವುದಾಗಿ ತಿಳಿದುಬಂದಿದೆ.

ಪಮೋರಿಯನ್ ಪ್ರಭೇದಕ್ಕೆ ಸೇರಿದ ಈ ನಾಯಿಗೆ ಕಡಿಮೆ ಪ್ರಮಾಣದಲ್ಲಿಕೊರೊನಾಸೋಂಕುತಗುಲಿದೆ ಎಂದು ಅಲ್ಲಿನ ಕೃಷಿ , ಮೀನುಗಾರಿಕೆಗಳ ಸಂರಕ್ಷಣೆ ಇಲಾಖೆಯು (ಎಎಫ್‌ಸಿಡಿ) ತಿಳಿಸಿದೆ.

ಇದುಮನುಷ್ಯನಿಂದ ಪ್ರಾಣಿಗೆ ಸೋಂಕು ಹರಡಿರುವ ಮೊದಲ ಪ್ರಕರಣ ಎಂದು ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆಯು ಒಪ್ಪಿರುವುದಾಗಿ ಎಎಫ್‌ಸಿಡಿ ಹೇಳಿದೆ.

ಕೊರೊನಾಸೋಂಕಿನ ಲಕ್ಷಣಗಳುಪಮೋರಿಯನ್ನಾಯಿಯಲ್ಲಿ ಕಾಣಿಸಿಕೊಂಡಿಲ್ಲ ಎಂದು ಸಂಸ್ಥೆಯು ತಿಳಿಸಿದೆ.

ಕೊರೊನಾವೈರಸ್ಸೋಂಕುತಗಲಿರುವಸಾಕು ಪ್ರಾಣಿಗಳನ್ನು ಹಾಂಗ್ ಕಾಂಗ್ 14 ದಿನಗಳ ಕಾಲ ಪ್ರತ್ಯೇಕ ಸ್ಥಳದಲ್ಲಿ ಇರಿಸುತ್ತಿದೆ. ಈಗಾಗಲೇ ಎರಡು ನಾಯಿಗಳನ್ನುಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗಿದೆ.

ಈ ಎರಡರ ಪೈಕಿ ಒಂದುನಾಯಿಗೆಕೊರೊನಾವೈರಸ್ಸೋಂಕುತಗಲಿಲ್ಲಎಂದು ಗೊತ್ತಾಗಿದೆ. ಅದನ್ನುಇನ್ನೊಮ್ಮೆಪರೀಕ್ಷಿಸಿ ದೃಡಪಡಿಸಿದಬಳಿಕ ನಾಯಿಯನ್ನು ಮಾಲೀಕರಿಗೆ ಒಪ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾಂಗ್ಕಾಂಗ್‌ನಲ್ಲಿ ಒಟ್ಟು 104 ಜನರಿಗೆಕೊರೊನಾವೈರಸ್ಸೋಂಕುತಗುಲಿದ್ದಇಬ್ಬರು ಮೃತಪಟ್ಟಿದ್ದಾಗಿ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT