ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ರಫೇಲ್‌ಗೆ ರಾಜನಾಥ್ ಆಯುಧ ಪೂಜೆ

ಭಾರತ–ಫ್ರಾನ್ಸ್ ರಕ್ಷಣಾ ಸಹಕಾರ ಕ್ಷೇತ್ರದಲ್ಲಿ ಮೈಲಿಗಲ್ಲು: ರಕ್ಷಣಾ ಸಚಿವ ರಾಜನಾಥ್ ಸಿಂಗ್
Last Updated 8 ಅಕ್ಟೋಬರ್ 2019, 17:09 IST
ಅಕ್ಷರ ಗಾತ್ರ

ಮೇರಿನ್ಯಾಕ್ (ಫ್ರಾನ್ಸ್) (ಪಿಟಿಐ): ಫ್ರಾನ್ಸ್‌ನ ಡಾಸೋ ಏವಿಯೇಷನ್ ಕಂಪನಿ ನಿರ್ಮಿತ ಮೊದಲ ರಫೇಲ್ ಯುದ್ಧ ವಿಮಾನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಇಲ್ಲಿ ಅಧಿಕೃತವಾಗಿ ಪಡೆದುಕೊಂಡರು. ಹಸ್ತಾಂತರ ಪ್ರಕ್ರಿಯೆಯಲ್ಲಿ ಫ್ರಾನ್ಸ್ ರಕ್ಷಣಾ ಸಚಿವ ಫ್ಲೋರೆನ್ಸ್ ಪಾರ್ಲಿ ಇದ್ದರು.

ರಫೇಲ್ ವಿಮಾನಕ್ಕೆ ‘ಆಯುಧಪೂಜೆ’ ನೆರವೇರಿಸಿದ ರಾಜನಾಥ್, ‘ಓಂ’ ಎಂದು ಬರೆದರು.

‘ಜಗತ್ತಿನಲ್ಲಿ ನಾಲ್ಕನೇ ಅತಿದೊಡ್ಡ ವಾಯುಪಡೆಯನ್ನು ಭಾರತ ಹೊಂದಿದೆ. ಬಹೂಪಯೋಗಿ ರಫೇಲ್ ಸೇರ್ಪಡೆಯಿಂದ ನಮ್ಮ ಸಾಮರ್ಥ್ಯ ಇನ್ನಷ್ಟು ವೃದ್ಧಿಸಲಿದೆ’ ಎಂದು ರಾಜನಾಥ್ ಹೇಳಿದ್ದಾರೆ. ಫ್ರೆಂಚ್ ಪದ ‘ರಫೇಲ್‌’ಗೆ ‘ಬಿರುಗಾಳಿ’ ಎಂಬ ಅರ್ಥವಿದೆ. ಹೆಸರಿಗೆ ತಕ್ಕಂತೆ ಬಿರುಗಾಳಿಯಂತೆ ಕಾರ್ಯಾಚರಣೆ ನಡೆಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಭಾರತೀಯ ವಾಯುಪಡೆಗೆ ಇದು ಐತಿಹಾಸಿಕ ಹಾಗೂ ಮೈಲಿಗಲ್ಲಿನ ದಿನ. ದುಷ್ಟ ಶಕ್ತಿಗಳ ವಿರುದ್ಧ ಜಯ ಸಾಧಿಸಿದ ವಿಜಯದಶಮಿ ಮತ್ತು ವಾಯುಪಡೆಯ ಸಂಸ್ಥಾಪನಾ ದಿನವೂ ಹೌದು’ ಎಂದು ಹೇಳಿದರು.

₹56 ಸಾವಿರ ಕೋಟಿ ಮೊತ್ತದ36 ರಫೇಲ್ ಯುದ್ಧವಿಮಾನಗಳನ್ನು ಪಡೆಯಲು 2016ರಲ್ಲಿ ಒಪ್ಪಂದ ಏರ್ಪಟ್ಟಿತ್ತು. ಮೇ 2020ಕ್ಕೆ 4 ರಫೇಲ್ ವಿಮಾನಗಳು ಭಾರತಕ್ಕೆ ಬರಲಿವೆ.

ರಫೇಲ್‌: ವಾಯುಪಡೆಗೆ ಭೀಮಬಲ

-ಶತ್ರುವಿನ ಹಲವು ಗುರಿಗಳನ್ನು ಏಕಕಾಲದಲ್ಲಿ ನಾಶಪಡಿಸುವ ಸಾಮರ್ಥ್ಯ

-ಒಂದು ರಫೇಲ್‌ ಎದುರಿಸಲು ವೈರಿಪಡೆಯು ಹಲವು ಯುದ್ಧವಿಮಾನಗಳನ್ನು ನಿಯೋಜಿಸಬೇಕು

-ಈಗ, ಪಾಕಿಸ್ತಾನದ ಒಂದು ಎಫ್‌–16 ಯುದ್ಧವಿಮಾನ ಎದುರಿಸಲು ಭಾರತವು 2 ಸುಖೋಯ್ ವಿಮಾನ ನಿಯೋಜಿಸಬೇಕಾಗುತ್ತದೆ. ಮುಂದೆ, ಭಾರತದ ಒಂದು ರಫೇಲ್‌ಗೆ ಪಾಕಿಸ್ತಾನವು ಎರಡು ಎಫ್–16 ನಿಯೋಜಿಸಬೇಕಾಗುತ್ತದೆ

-ಅಣ್ವಸ್ತ್ರ ಸಿಡಿತಲೆ ಇರುವ ಕ್ಷಿಪಣಿಗಳನ್ನು ಉಡ್ಡಯನ ಮಾಡುವ ಸಾಮರ್ಥ್ಯ

-ಮುಂದಿನ ತಲೆಮಾರಿನ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಅಳವಡಿಸಲು ಚಿಂತನೆ

-ಅಂಬಾಲ ಹಾಗೂ ಪಶ್ಚಿಮ ಬಂಗಾಳದ ಹಾಶಿಮಾರಾದಲ್ಲಿ ರಫೇಲ್ ನಿಯೋಜಿಸಲು ಸಿದ್ಧತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT