ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದಿತ ಸಮುದ್ರ ಪ್ರದೇಶದಲ್ಲಿ ದಕ್ಷಿಣ ಕೊರಿಯಾ ಸೇನಾಭ್ಯಾಸ: ಉತ್ತರ ಕೊರಿಯಾ ಕಿಡಿ

Last Updated 9 ಮೇ 2020, 2:22 IST
ಅಕ್ಷರ ಗಾತ್ರ

ಸೋಲ್‌: ವಿವಾದಿತ ಸಮುದ್ರ ಪ್ರದೇಶದಲ್ಲಿ ಸೇನಾ ಅಭ್ಯಾಸ ನಡೆಸಿದ್ದಕ್ಕೆ ದಕ್ಷಿಣ ಕೊರಿಯಾ ವಿರುದ್ಧ ಉತ್ತರ ಕೊರಿಯಾ ಆಕ್ರೋಶ ವ್ಯಕ್ತಪಡಿಸಿದೆ.

ಜೆಟ್‌ ಯುದ್ಧ ವಿಮಾನಗಳು ಮತ್ತು ಯುದ್ಧ ಹಡಗುಗಳನ್ನು ದಕ್ಷಿಣ ಕೊರಿಯಾ ಸಮರಾಭ್ಯಾಸಕ್ಕೆ ನಿಯೋಜಿಸಿತ್ತು. ಇದು ಸೇನಾ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ದೂರಿದೆ.

‘ದಕ್ಷಿಣ ಕೊರಿಯಾ ಕೈಗೊಂಡಿರುವ ಕ್ರಮಗಳು ಪ್ರಚೋದನಾಕಾರಿಯಾಗಿವೆ. ಇದಕ್ಕೆ ತಕ್ಕ ಉತ್ತರ ನೀಡುವುದು ಅಗತ್ಯವಿದೆ. 2018ರಲ್ಲಿ ಕೈಗೊಳ್ಳಲಾದ ಒಪ್ಪಂದವನ್ನು ದಕ್ಷಿಣ ಕೊರಿಯಾ ಉಲ್ಲಂಘಿಸಿದೆ. ಉಭಯ ದೇಶಗಳ ನಡುವಣ ದ್ವೇಷವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಭೂಮಿ ಮತ್ತು ಸಮುದ್ರದ ಗಡಿಯಲ್ಲಿ ಯಾವುದೇ ರೀತಿ ಸೇನಾ ಅಭ್ಯಾಸ ನಡೆಸಬಾರದು ಎಂದು 2018ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು’ ಎಂದು ಉತ್ತರ ಕೊರಿಯಾ ತಿಳಿಸಿದೆ.

ಆದರೆ, ಈ ಆರೋಪವನ್ನು ದಕ್ಷಿಣ ಕೊರಿಯಾ ತಳ್ಳಿ ಹಾಕಿದೆ. ಯಾವುದೇ ಒಪ್ಪಂದವನ್ನು ದಕ್ಷಿಣ ಕೊರಿಯಾ ಉಲ್ಲಂಘಿಸಿಲ್ಲ ಎಂದು ತಿಳಿಸಿದೆ.

‘ಪಶ್ಚಿಮ ಭಾಗದಲ್ಲಿ ಸೇನಾ ಅಭ್ಯಾಸ ಕೈಗೊಳ್ಳಲಾಗಿತ್ತು. ಇದು ಸಮುದ್ರದ ಗಡಿಯಿಂದ 300 ಕಿಲೋ ಮೀಟರ್‌ ದೂರದಲ್ಲಿದೆ’ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT