ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಿಯಂತ್ರಣ: ಜಗತ್ತಿನಲ್ಲಿ ಭಾರತವೇ ಮುಂದು

Last Updated 11 ಏಪ್ರಿಲ್ 2020, 8:42 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ 19 ವಿರುದ್ಧ ಭಾರತವು ಜಗತ್ತಿನಲ್ಲೇ ಅತ್ಯಂತ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡಿದೆ‌ ಎಂದು ಆಕ್ಸ್‌ಫರ್ಡ್‌ ಸಿಜಿಆರ್‌ಟಿ (’ಆಕ್ಸ್‌ಫರ್ಡ್‌ ಕೋವಿಡ್‌ 19 ಗವರ್ನ್‌ಮೆಂಟ್‌ ರೆಸ್ಪಾನ್ಸ್‌ ಟ್ರಾಕರ್‌) ಹೇಳಿದೆ.

ಕೋವಿಡ್‌ 19 ವಿರುದ್ಧ ಜಗತ್ತಿನ 73 ರಾಷ್ಟ್ರಗಳು ಕೈಗೊಂಡಿರುವ ಕ್ರಮಗಳನ್ನು ಅಧ್ಯಯನ ನಡೆಸಿರುವ ಆಕ್ಸ್‌ಫರ್ಡ್‌ ಸಿಜಿಆರ್‌ಟಿ ಈ ವಿಷಯ ಬಹಿರಂಗಪಡಿಸಿದೆ.

ಜಗತ್ತಿನ ವಿವಿಧ ರಾಷ್ಟ್ರಗಳು ಕೊರೊನಾ ವೈರಸ್‌ ವಿರುದ್ಧ ಕೈಗೊಂಡಿರುವ ಕ್ರಮಗಳನ್ನು ಆಕ್ಸ್‌ಫರ್ಡ್‌ ಸಿಜಿಆರ್‌ಟಿ ಪರಸ್ಪರ ತಾಳೆ ಮಾಡಿದೆ. ಈ ವಿಚಾರದಲ್ಲಿ ಭಾರತ 100 ಅಂಕಗಳನ್ನು ಪಡೆದಿದೆ ಎಂದು ‘ಆಕ್ಸ್‌ಫರ್ಡ್‌ ಸಿಜಿಆರ್‌ಟಿ’ ತಿಳಿಸಿರುವುದಾಗಿ ಸಿಎನ್‌ಬಿಸಿ ಟಿವಿ 18 ವರದಿ ಮಾಡಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ‘ಬ್ಲವಾಟ್ನಿಕ್ ಸ್ಕೂಲ್ ಆಫ್ ಗವರ್ನಮೆಂಟ್‌’ನ ಸಂಶೋಧಕರು ‘ಆಕ್ಸ್‌ಫರ್ಡ್‌ ಸಿಜಿಆರ್‌ಟಿ’ಯನ್ನು ರಚಿಸಿದೆ. ಜಗತ್ತಿನ ಹಲವು ರಾಷ್ಟ್ರಗಳ ಸರ್ಕಾರಗಳು ತೆಗೆದುಕೊಂಡಿರುವ ವಿಭಿನ್ನ, ಸಾಮಾನ್ಯ ನೀತಿಗಳ ಬಗ್ಗೆ ‘ಆಕ್ಸ್‌ಫರ್ಡ್‌ ಸಿಜಿಆರ್‌ಟಿ’ ವ್ಯವಸ್ಥಿತವಾಗಿ ಮಾಹಿತಿ ಸಂಗ್ರಹಿಸಿದೆ. ಅಲ್ಲದೆ, ಕಟ್ಟುನಿಟ್ಟಿನ ಕ್ರಮಗಳಿಗೆ ಅಂಕ ನೀಡಿದೆ. ಅಲ್ಲಿ ನೀಡಲಾದ ಅಂಕಗಳನ್ನು ಸಾಮಾನ್ಯ ಕಟ್ಟುನಿಟ್ಟಿನ ಕ್ರಮದ ಸೂಚ್ಯಾಂಕದೊಂದಿಗೆ ತುಲನೆ ಮಾಡಿದೆ. ಅದರಲ್ಲಿ ಭಾರತಕ್ಕೆ ಹೆಚ್ಚಿನ ಅಂಕಗಳು ಲಭ್ಯವಾಗಿವೆ.

ಸಂಚಾರ ನಿರ್ಬಂಧ, ಶಾಲೆಗಳನ್ನು ಮುಚ್ಚುವುದು, ಆರ್ಥಿಕ ಕ್ರಮಗಳು ಸೇರಿದಂತೆ ಸಾರ್ವಜನಿಕವಾಗಿ ಲಭ್ಯವಿರುವ 13 ಕ್ರಮಗಳನ್ನು ‘ಆಕ್ಸ್‌ಫರ್ಡ್‌ ಸಿಜಿಆರ್‌ಟಿ’ ಅಧ್ಯಯನಕ್ಕೆ ಒಳಪಡಿಸದೆ.

ದಕ್ಷಿಣ ಆಫ್ರಿಕಾ, ಇಸ್ರೇಲ್, ನ್ಯೂಜಿಲೆಂಡ್ ಮತ್ತು ಮಾರಿಷಸ್ ಈ ಟ್ರ್ಯಾಕರ್‌ನಲ್ಲಿ 100 ಅಂಕಗಳನ್ನು ಗಳಿಸಿವೆ. ಫ್ರಾನ್ಸ್, ಇಟಲಿ, ಜೆಕ್ ರಿಪಬ್ಲಿಕ್ 90 ಅಂಕಗಳನ್ನು ಗಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT