ಶನಿವಾರ, ಫೆಬ್ರವರಿ 29, 2020
19 °C

ಥಾಯ್ ಯೋಧನ ಹುಚ್ಚಾಟ | ಅಡ್ಡಾದಿಡ್ಡಿ ಹಾರಿದ ಗುಂಡು: 21 ಜನರ ಬಲಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ನಖೋನ್ ರತ್ಚಸಿಮಾ (ಥಾಯ್ಲೆಂಡ್): ಈಶಾನ್ಯ ಥಾಯ್ಲೆಂಡ್‌ನ ನಖೋನ್ ರತ್ಚಸಿಮಾ ನಗರದ ಮಾಲ್‌ಗೆ ನುಗ್ಗಿ ಅಡ್ಡಾದಿಡ್ಡಿ ಗುಂಡು ಹಾರಿಸುವ ಮೂಲಕ 21 ಜನರನ್ನು ಕೊಂದು, 42 ಮಂದಿಯನ್ನು ಗಾಯಗೊಳಿಸಿದ್ದ ಯೋಧನನ್ನು ಕೊಲ್ಲಲಾಗಿದೆ ಎಂದು ಥಾಯ್ಲೆಂಡ್‌ನ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಹಣಕಾಸು ವ್ಯವಹಾರದಿಂದ ಸಿಟ್ಟಿಗೆದ್ದಿದ್ದ ಯೋಧ ಮೊದಲು ಇಬ್ಬರನ್ನು ಕೊಂದಿದ್ದ. ಜನನಿಬಿಡ ಮಾಲ್‌ನಲ್ಲಿ ಶನಿವಾರ ಏಕಾಏಕಿ ಅಡ್ಡಾದಿಡ್ಡಿ ಗುಂಡು ಹಾರಿಸಲು ಆರಂಭಿಸಿದ. ಶಾಂಪಿಂಗ್‌ಗೆಂದು ಬಂದಿದ್ದವರು ಗುಂಡಿನ ಸದ್ದು ಕೇಳಿ ಭಯಗೊಂದು ದಿಕ್ಕಾಪಾಲಾಗಿ ಓಡಿದರು.

‘ಅಡ್ಡಾದಿಡ್ಡಿ ಗುಂಡು ಹಾರಿಸಿದ ಯೋಧನನ್ನು ಸಾರ್ಜೆಂಟ್ ಜಕ್ರಪಂತ್ ತೊಮ್ಮಾ ಎಂದು ಗುರುತಿಸಲಾಗಿದೆ’ ಎಂದು ಥಾಯ್ಲೆಂಡ್‌ನ ರಕ್ಷಣಾ ಇಲಾಖೆ ವಕ್ತಾರ ಲೆಫ್ಟಿನೆಂಟ್ ಜನರಲ್ ಕೊಂಗ್‌ಚೀಪ್ ತಂತ್ರವನಿಚ್ ತಿಳಿಸಿದ್ದಾರೆ.

ಬಡವರೇ ಹೆಚ್ಚಾಗಿರುವ ಥಾಯ್ಲೆಂಡ್‌ನ ಈಶಾನ್ಯ ಪ್ರಾಂತ್ಯದ ಪ್ರಮುಖ ನಗರ ನಖೋನ್ ರತ್ಚಸಿಮಾದಲ್ಲಿ ವಿಮಾನ ನಿಲ್ದಾಣ ಮಾದರಿಯಲ್ಲಿರುವ ಮಾಲ್‌ನ ಆಟೋಟ ವಲಯದಲ್ಲಿ ಗುಂಡು ಹಾರಾಟ ನಡೆದಿತ್ತು.

ಶನಿವಾರ ನಡುಮಧ್ಯಾಹ್ನ ಅಡ್ಡಾದಿಡ್ಡಿ ಗುಂಡು ಹಾರಾಟ ಆರಂಭವಾದಾಗ ಜನರು ಭಯದಿಂದ ಓಡುತ್ತಿರುವ ಮತ್ತು ರಕ್ಷಣೆಗಾಗಿ ಸಿಕ್ಕಸಿಕ್ಕಲ್ಲಿ ಬಚ್ಚಿಟ್ಟುಕೊಳ್ಳುತ್ತಿರುವ ದೃಶ್ಯಗಳಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು