ಬುಧವಾರ, ಏಪ್ರಿಲ್ 1, 2020
19 °C
ಸತ್ತವರ ಸಂಖ್ಯೆ 2,788 ಏರಿಕೆ , ಚೀನಾದಲ್ಲಿ ಅಧಿಕ

ಕೋವಿಡ್‌ : ಇರಾನ್‌ನಲ್ಲಿ 34 ಬಲಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ‘ಕೋವಿಡ್‌–19’ ಎಂದು ಹೆಸರಿಸಲಾದ ಮಾರಣಾಂತಿಕ ಸೋಂಕಿನಿಂದ ಜಾಗತಿಕವಾಗಿ 83,000 ಜನರು ಬಾಧಿತರಾಗಿದ್ದು, ಇದುವರೆಗೂ 2,800 ಮಂದಿ ಸತ್ತಿದ್ದಾರೆ. ಚೀನಾದಲ್ಲಿ ಅತ್ಯಧಿಕ ಅಂದರೆ 2,788 ಮಂದಿ ಮೃತರಾಗಿದ್ದಾರೆ. 

ಅಲ್ಲದೆ, ಚೀನಾದಲ್ಲಿ 78,824 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಜಪಾನ್‌ನಲ್ಲಿ 918 ಜನರಿಗೆ ಸೋಂಕು ತಗುಲಿದ್ದು, ಇವರಲ್ಲಿ 705 ಮಂದಿ ಡೈಮಂಡ್‌ ಪ್ರಿನ್ಸೆನ್ಸ್‌ ಹಡಗಿನಲ್ಲಿದ್ದ ಪ್ರಯಾಣಿಕರೇ ಆಗಿದ್ದಾರೆ. 

34 ಜನ ಬಲಿ (ಟೆಹ್ರಾನ್‌ ವರದಿ): ಇನ್ನೊಂದೆಡೆ, ಇರಾನ್‌ನಲ್ಲಿ ಕೊರೊನಾ ವೈರಸ್‌ ಸೋಂಕಿಗೆ ಬಲಿಯಾದವರ ಸಂಖ್ಯೆ 34ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಒಟ್ಟು 388 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಮಾನ ಸಂಚಾರ ರದ್ದು ಇಸ್ಲಾಮಾಬಾದ್ (ಎಎಫ್‌ಪಿ): ಸೋಂಕು ಭೀತಿ ಹಿನ್ನೆಲೆಯಲ್ಲಿ ಇರಾನ್‌ ನಡುವಣ ವೈಮಾನಿಕ ಸಂಪರ್ಕವನ್ನು ಪಾಕಿಸ್ತಾನ ರದ್ದುಪಡಿಸಿದೆ. ಇರಾನ್‌ಗೆ ತೆರಳಿದ್ದ ಇಬ್ಬರಿಗೆ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ಈ ಕ್ರಮಗೊಳ್ಳಲಾಗಿದೆ ಎಂದು ನಾಗರಿಕ ವಿಮಾನ ಪ್ರಾಧಿಕಾರದ ವಕ್ತಾರ ಅಬ್ದುಲ್ ಸತ್ತಾರ್‌ ಖೋಖರ್‌ ತಿಳಿಸಿದ್ದಾರೆ. 

ಹೊರಗೆ ಬರಬೇಡಿ; ಜಪಾನ್‌ ಮನವಿ(ಟೋಕಿಯೊ ವರದಿ): ಸೋಂಕುವ್ಯಾಪಿಸಿರುವ ಇಲ್ಲಿನ ಹೊಕ್ಕಾಡಿಯೊ  ಪ್ರದೇಶದಲ್ಲಿ ಜನರು ವಾರಾಂತ್ಯದ ಸಂಭ್ರಮಗಳಿಗೆ ಹೊರಗೆ ಬರಬಾರದು ಎಂದು ಸರ್ಕಾರ ಕೋರಿದೆ.ಗವರ್ನರ್ ನವೊಮಿಚಿ ಸುಜುಕಿ
ಮುಂಜಾಗ್ರತೆಯಾಗಿ ಮಾ.19ರವರೆಗೂ ತುರ್ತು ಸ್ಥಿತಿ ಘೋಷಿಸಿದ್ದಾರೆ. 

ಸ್ವಿಟ್ಜರ್‌ಲ್ಯಾಂಡ್‌; ಕಾರ್ಯಕ್ರಮ ರದ್ದು (ಜೆನೆವಾ)(ಎಎಫ್‌ಪಿ): ಸೋಂಕು ಭೀತಿಹಿನ್ನೆಲೆಯಲ್ಲಿ ಮಾರ್ಚ್‌ 15ರವರೆಗೆ
ದೇಶದಲ್ಲಿ ಎಲ್ಲ ಮುಖ್ಯ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು