ಜಾಗತಿಕ ಕಾರ್ಯಾಚರಣೆ: ಸಾವಿರಾರು ವನ್ಯಜೀವಿಗಳ ರಕ್ಷಣೆ
ಲಿಯಾನ್: ಜಾಗತಿಕ ಮಟ್ಟದಲ್ಲಿ ವನ್ಯಜೀವಿಗಳ ಕಳ್ಳಸಾಗಣೆ ಮಾಡುತ್ತಿದ್ದ ಜಾಲಗಳನ್ನು ಪತ್ತೆ ಹಚ್ಚಿರುವ ಇಂಟರ್ಪೋಲ್, ಸಾವಿರಾರು ವನ್ಯಜೀವಿಗಳನ್ನು ರಕ್ಷಿಸಿದೆ.
‘ಜಾಗತಿಕ ಕಸ್ಟಮ್ಸ್ ಸಂಸ್ಥೆ (ಡಬ್ಲ್ಯುಸಿಒ) ಸಹಯೋಗದಲ್ಲಿ 109 ರಾಷ್ಟ್ರಗಳಲ್ಲಿ ಈ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
‘ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ 582 ಶಂಕಿತರನ್ನು ಬಂಧಿಸಲಾಗಿದ್ದು, ಇವರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಂಭವ ಇದೆ’ ಎಂದು ಇಂಟರ್ಪೋಲ್ ವಕ್ತಾರೆ ತಿಳಿಸಿದ್ದಾರೆ.
‘ವನ್ಯಜೀವಿಗಳ ಕಳ್ಳಸಾಗಣೆಯಿಂದ ನಮ್ಮ ಪರಿಸರ ನಾಶವಾಗುವುದರ ಜತೆಗೆ ವಂಚನೆ, ಅಕ್ರಮ ಹಣ ಸಾಗಣೆಯಂತಹ ಅಪರಾಧ ಕೃತ್ಯಗಳು ಹೆಚ್ಚುತ್ತವೆ’ ಎಂದು ಇಂಟರ್ಪೋಲ್ ಪ್ರಧಾನ ಕಾರ್ಯದರ್ಶಿ ಜೊರ್ಗನ್ ಸ್ಟಾಕ್ ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.