ಭಾನುವಾರ, ಜನವರಿ 19, 2020
23 °C

ಉಕ್ರೇನ್‌ ವಿಮಾನ ಪತನ: ಸಂಸತ್‌ನಲ್ಲಿ ವಿವರಣೆ ನೀಡಿದ ಮೇಜರ್‌ ಜನರಲ್ ಹೊಸೆನ್ ಸಲಾಮಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಟೆಹರಾನ್‌: ಉಕ್ರೇನ್‌ನ ನಾಗರಿಕ ವಿಮಾನ ಪತನ ಕುರಿತು ರೆವಲ್ಯೂಷನರಿ ಗಾರ್ಡ್ಸ್‌ನ ಮುಖ್ಯಸ್ಥ ಮೇಜರ್‌ ಜನರಲ್‌ ಹೊಸೆನ್ ಸಲಾಮಿ ಅವರು ಭಾನುವಾರ ಇರಾನ್‌ನ ಸಂಸತ್‌ಗೆ ವಿವರಣೆ ನೀಡಿದ್ದಾರೆ.

ಜನವರಿ 3ರಂದು ಬಾಗ್ದಾದ್‌ನಲ್ಲಿ ಅಮೆರಿಕ ಪಡೆಗಳು ಯಾವ ರೀತಿಯಲ್ಲಿ ಡ್ರೋನ್‌ ದಾಳಿ ನಡೆಸಿ ಕಮಾಂಡರ್‌ ಖಾಸಿಂ ಸುಲೇಮಾನಿ ಅವರನ್ನು ಹತ್ಯೆ ಮಾಡಿವೆ ಎಂಬುದನ್ನು ಅವರು ಸಂಸತ್‌ನಲ್ಲಿ ವಿವರಿಸಿದ್ದಾರೆ ಎಂದು ಐಎಸ್‌ಎನ್‌ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರತೀಕಾರವಾಗಿ ಇರಾಕ್‌ನಲ್ಲಿರುವ ಅಮೆರಿಕ ಪಡೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರುವ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.

ವಿಮಾನ ಪತನಕ್ಕೆ ಕಾರಣವಾದ ಪ್ರಮಾದದ ಬಗ್ಗೆ ವಿವರಣೆ ನೀಡುವಂತೆ ಸಂಸತ್‌ನಲ್ಲಿ ಸ್ಪೀಕರ್‌ ಅಲಿ ಲರಿಜಾನಿ ಅವರು ಭದ್ರತೆ ಮತ್ತು ವಿದೇಶಾಂಗ ನೀತಿ ಆಯೋಗಕ್ಕೆ ಸೂಚಿಸಿದ್ದಾರೆ.

ಉಕ್ರೇನ್‌ನ ವಿಮಾನ ಪತನದ ಹೊಣೆ ಹೊತ್ತುಕೊಂಡ ಇರಾನ್‌ ಶನಿವಾರ ಕ್ಷಮೆ ಯಾಚಿಸಿತ್ತು. ಕ್ಷಿಪಣಿಯನ್ನು ಆಕಸ್ಮಿಕವಾಗಿ ಉಡಾಯಿಸಲಾಗಿದ್ದು, ಅದು ವಿಮಾನವನ್ನು ಹೊಡೆದುರುಳಿಸಿದೆ ಎಂದೂ ಹೇಳಿತ್ತು.

ವಿಮಾನ ದುರಂತದಲ್ಲಿ ಇರಾನ್‌ ಮತ್ತು ಕೆನಡಾ ಪ್ರಜೆಗಳು ಸೇರಿದಂತೆ 176 ಮಂದಿ ಮೃತಪಟ್ಟಿದ್ದರು.

 

 

 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು