ಅಮೆರಿಕ ಉತ್ಪನ್ನಗಳಿಗೆ ಸುಂಕ: ಭಾರತದ ವಿರುದ್ಧ ಟ್ರಂಪ್‌ ಗರಂ

ಶುಕ್ರವಾರ, ಜೂಲೈ 19, 2019
24 °C

ಅಮೆರಿಕ ಉತ್ಪನ್ನಗಳಿಗೆ ಸುಂಕ: ಭಾರತದ ವಿರುದ್ಧ ಟ್ರಂಪ್‌ ಗರಂ

Published:
Updated:

ವಾಷಿಂಗ್ಟನ್: ಅಮೆರಿಕದ ಉತ್ಪನ್ನಗಳಿಗೆ ಸುಂಕ ವಿಧಿಸುತ್ತಿರುವುದಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ’ಭಾರತದ ಈ ನಡೆಯನ್ನು ಎಂದಿಗೂ ಒಪ್ಪಿಕೊಳ್ಳಲಾಗದು‘ ಎಂದು ಹೇಳಿದ್ದಾರೆ.

ವ್ಯಾಪಾರ ಸಂಬಂಧ ವಿಷಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತನಾಡಿ ಇತ್ಯರ್ಥ ಮಾಡಿಕೊಂಡ ನಂತರ ಈಗ ಸುಂಕ ವಿಧಿಸುತ್ತಿರುವುದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

’ಅಮೆರಿಕ ಮೊದಲು’ ನೀತಿಯನ್ನು ಪ್ರತಿಪಾದಿಸುತ್ತಿರುವ ಟ್ರಂಪ್ ಅವರು ತಮ್ಮ ದೇಶದ ಉತ್ನನ್ನಗಳಿಗೆ ಭಾರಿ ಪ್ರಮಾಣದಲ್ಲಿ ಸುಂಕ ವಿಧಿಸುವುದನ್ನು ವಿರೋಧಿಸುತ್ತಿದ್ದಾರೆ.

ಜಪಾನ್‌ನ ಒಸಾಕದಲ್ಲಿ ಇತ್ತೀಚೆಗೆ ನಡೆದ ಜಿ20 ಶೃಂಗಸಭೆಯಲ್ಲಿ ನರೇಂದ್ರ ಮೋದಿ ಅವರ ಜತೆ ಮಾತನಾಡಿದ್ದ ಟ್ರಂಪ್‌ ಅವರು, ದ್ವಿಪಕ್ಷೀಯ ವ್ಯಾಪಾರಕ್ಕೆ ಸಂಬಂಧಿಸಿದಂತೆ ಸೃಷ್ಟಿಯಾಗಿದ್ದ ವಿವಾದಗಳ ಬಗ್ಗೆ ಚರ್ಚೆ ನಡೆಸಿದ್ದರು. ಅಲ್ಲದೆ ಇವುಗಳನ್ನು ಪರಿಹರಿಸಿಕೊಳ್ಳಲು ವಾಣಿಜ್ಯ ಸಚಿವರ ಸಭೆ ಏರ್ಪಡಿಸಲು ಒಪ್ಪಿದ್ದರು.

ಈ ವಾರಾಂತ್ಯದಲ್ಲಿ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್‌ಬರ್‌ ರೋಸ್‌ ಮತ್ತು ಇಂಧನ ಕಾರ್ಯದರ್ಶಿ ರಿಕಿ ಪೆರ್‍ರಿ ಅವರು ವಾಷಿಂಗ್ಟನ್ ಡಿ.ಸಿಯಲ್ಲಿ ಸೇರಿ ಭಾರತಕ್ಕೆ ಸಂಬಂಧಿಸಿದ ವಾಣಿಜ್ಯ ವಿಷಯಗಳನ್ನು ಚರ್ಚೆ ಮಾಡಲಿದ್ದಾರೆ.

ದ್ವಿದಳ ಧಾನ್ಯ, ಬಾದಾಮಿ ಸೇರಿದಂತೆ ಅಮೆರಿಕದಿಂದ ರಫ್ತಾಗುವ 28 ಉತ್ಪನ್ನಗಳ ಮೇಲೆ ಭಾರತ ಸುಂಕ ಹೆಚ್ಚಿಸಿತ್ತು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !