ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂಜಾನಿಯಾ: ಚರ್ಚ್‌ನಲ್ಲಿ ಕಾಲ್ತುಳಿತಕ್ಕೆ 20 ಬಲಿ

Last Updated 2 ಫೆಬ್ರುವರಿ 2020, 16:45 IST
ಅಕ್ಷರ ಗಾತ್ರ

ನೈರೋಬಿ: ತಾಂಜಾನಿಯಾದ ಮೋಶಿ ಪಟ್ಟಣದ ಚರ್ಚ್‌ವೊಂದರಲ್ಲಿ ಶನಿವಾರ ಮಧ್ಯಾಹ್ನ ಕಾಲ್ತುಳಿತಕ್ಕೆ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ.

‘16 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿವರ: ಇಲ್ಲಿನ ಬೋಧಕ ಬೋನಿಫೇಸ್‌ ಮಾಂಪೋಸಾ ನೇತೃತ್ವದಲ್ಲಿ ನಡೆದ ಪ್ರಾರ್ಥನೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ತಮ್ಮನ್ನು ಧರ್ಮಪ್ರಚಾರಕ ಎಂದು ಸ್ವಯಂ ಘೋಷಿಸಿಕೊಂಡಿರುವ ಮಾಂಪೋಸಾ, ಎಣ್ಣೆಯನ್ನು ನೆಲದ ಮೇಲೆ ಸುರಿದು, ‘ಅದು ಅಭಿಷೇಕದ ಪವಿತ್ರ ಎಣ್ಣೆಯಾಗಿದೆ. ಇದನ್ನು ಸೇವಿಸಿದರೆ ಮತ್ತು ಹಚ್ಚಿಕೊಂಡರೆ ಅನಾರೋಗ್ಯದಿಂದ ಬಳಲುತ್ತಿರುವವರು ಗುಣಮುಖರಾಗಲಿದ್ದಾರೆ’ ಎಂದು ಹೇಳಿದರು.

ಎಣ್ಣೆ ಪಡೆಯಲು ಜನರು ಮುಗಿಬಿದ್ದಿದ್ದರಿಂದ ಈ ಅವಘಡ ಸಂಭವಿಸಿದೆ. 20 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಘಟನೆ ಹಿಂದೆಯೇ ಮಾಂಪೋಸಾ ಓಡಿ ಹೋಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಪೊಲೀಸರು ಘಟನೆಯ ತನಿಖೆ ಆರಂಭಿಸಿದ್ದಾರೆ. ತನಿಖೆಗೆ ಹಾಜರಾಗಲು ಮಾಂಪೋಸಾ ಅವರಿಗೆ ಸೂಚಿಸಲಾಗಿದೆ. ತಪ್ಪಿಸಿಕೊಳ್ಳಲು ಅವರಿಗೆ ಯಾವುದೇ ಮಾರ್ಗಗಳಿಲ್ಲ’ ಎಂದು ತಾಂಜಾನಿಯಾದ ಪೊಲೀಸ್‌ ಮುಖ್ಯಸ್ಥ ಸೈಮನ್‌ ಸಿರೊ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT