ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ಮಾಹಿತಿ ಹರಡುತ್ತಿದ್ದ ಸಾವಿರಾರು ನಕಲಿ ಟ್ವಿಟರ್‌ ಖಾತೆಗಳು ಸ್ಥಗಿತ

ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ ಹರಡುವಿಕೆ ತಡೆಯಲು ಟ್ವಿಟರ್‌ ಕ್ರಮ
Last Updated 20 ಸೆಪ್ಟೆಂಬರ್ 2019, 19:40 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ತಪ್ಪು ಮಾಹಿತಿ ಹರಡುತ್ತಿದ್ದ ಸಾವಿರಾರು ನಕಲಿ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಟ್ವಿಟರ್ ಶುಕ್ರವಾರ ಪ್ರಕಟಿಸಿದೆ.

ಪ್ರಾದೇಶಿಕವಾಗಿ ಯುದ್ಧವನ್ನು ಬೆಂಬಲಿಸುವುದರ ಭಾಗವಾಗಿ ಸೌದಿ ಪರ ಸಂದೇಶಗಳನ್ನು ಈ ಖಾತೆಗಳ ಮೂಲಕ ರವಾನಿಸಲಾಗುತ್ತಿತ್ತು.

ಈಜಿಪ್ಟ್‌ ಮತ್ತು ಯುಎಇ ಗುರಿಯಾಗಿಸಿಕೊಂಡು ಕತಾರ್‌ ಮತ್ತು ಯೆಮೆನ್‌ನಿಂದ ಕಾರ್ಯನಿರ್ವಹಿಸುತ್ತಿದ್ದ ಖಾತೆಗಳು ಹಾಗೂ ಹಾಂಗ್‌ಕಾಂಗ್‌ನ ಪ್ರತಿಭಟನಾಕಾರರಲ್ಲಿ ತಪ್ಪು ಸಂದೇಶ ಬಿತ್ತುತ್ತಿದ್ದ ಚೀನಾ ಮೂಲದ ಖಾತೆಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಟ್ವಿಟರ್‌ ತಿಳಿಸಿದೆ.

ಯುಎಇಯಿಂದ ಕಾರ್ಯನಿರ್ವಹಿಸುತ್ತಿದ್ದ 4,258 ಖಾತೆಗಳು, ಚೀನಾ ಮೂಲದ 4,302 ಖಾತೆಗಳನ್ನು ರದ್ದುಪಡಿಸಲಾಗಿದೆ. ಸ್ಪೇನ್‌ ಮತ್ತು ಈಕ್ವೆಡಾರ್‌ನಲ್ಲಿಯೂ ಹೆಚ್ಚುವರಿ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ.

ಸಾರ್ವಜನಿಕ ಅಭಿಪ್ರಾಯಗಳನ್ನು ತಿರುಚಲು ಜನರು ಟ್ವಿಟರ್‌ ವೇದಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಇರುವವರು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಸಂಸ್ಥೆಯು ಈ ಮಾಹಿತಿಯನ್ನು ಬಿಡುಗಡೆ ಮಾಡಿದೆ.

ಮಾಹಿತಿ ತಿರುಚುವಿಕೆ ತಡೆಯುವ ಕ್ರಮವಾಗಿ ಸಾಮಾಜಿಕ ಜಾಲತಾಣ ಗಳಾದ ಫೇಸ್‌ಬುಕ್‌, ಟ್ವಿಟರ್‌ ಇತ್ತೀಚಿನ ದಿನಗಳಲ್ಲಿ ಕೈಗೊಂಡಿರುವ ಸರಣಿ ನಿಯಂತ್ರಣ ಕ್ರಮಗಳ ಮುಂದುವರಿದ ಭಾಗವಾಗಿ ಈ ಬೆಳವಣಿಗೆ ನಡೆದಿದೆ.

ಫೇಸ್‌ಬುಕ್‌ ಕಳೆದ ತಿಂಗಳು ಈಜಿಪ್ಟ್‌, ಸೌದಿ ಅರೇಬಿಯಾ ಮತ್ತು ಯುಎಇ ಮೂಲದ ಹಲವು ಖಾತೆಗಳನ್ನು ಹಾಂಗ್‌ಕಾಂಗ್‌ ಅನ್ನು ಕೇಂದ್ರೀ
ಕರಿಸಿ ಸಂದೇಶ ಪ್ರಸಾರ ಮಾಡಿದ್ದ ಕಾರಣಗಳಿಗಾಗಿ ಸ್ಥಗಿತಗೊಳಿಸಿತ್ತು.

ಸೌದಿ ಅರೇಬಿಯದ ವೈರಿರಾಷ್ಟ್ರ ಕತಾರ್ ಮತ್ತು ಇರಾನ್‌ ಹಾಗೂ ಇತರೆ ರಾಷ್ಟ್ರಗಳನ್ನು ಗುರಿಯಾಗಿಸಿ ಕಾರ್ಯನಿರ್ವಹಿಸುತ್ತಿದ್ದ 273 ಖಾತೆಗಳನ್ನು ಟ್ವಿಟರ್‌ ಕೈಬಿಟ್ಟಿದೆ.
ಈ ಖಾತೆಗಳನ್ನು ಯುಎಇ ಮತ್ತು ಈಜಿಪ್ಟ್‌ ಮೂಲದ ಡಾಟ್‌ಡೇವ್‌ ತಂತ್ರಜ್ಞಾನ ಕಂಪನಿಯು ಸೃಷ್ಟಿಸಿ, ನಿರ್ವಹಣೆ ಮಾಡುತ್ತಿತ್ತು ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಡಾಟ್‌ಡೇವ್‌ ಪ್ರತಿಕ್ರಿಯೆ ನೀಡಿಲ್ಲ.

ಆಗಸ್ಟ್‌ ತಿಂಗಳಲ್ಲಿ 2ಲಕ್ಷಕ್ಕೂ ಅಧಿಕ ಚೀನಾ ಮೂಲದ ನಕಲಿ ಖಾತೆಗಳನ್ನು ಟ್ವಿಟರ್ ಗುರುತಿಸಿ ಕ್ರಮಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT