ಬುಧವಾರ, ಏಪ್ರಿಲ್ 1, 2020
19 °C

ಅಫ್ಗಾನಿಸ್ತಾನ: ದಶಕದಲ್ಲಿ 1 ಲಕ್ಷ ನಾಗರಿಕರು ಬಲಿ

ಎಪಿ Updated:

ಅಕ್ಷರ ಗಾತ್ರ : | |

ಕಾಬೂಲ್‌: ಕಳೆದ 10 ವರ್ಷಗಳಲ್ಲಿ ಹಿಂಸಾಕೃತ್ಯಗಳಿಗೆ ಅಫ್ಗಾನಿಸ್ತಾನದ 1 ಲಕ್ಷ ನಾಗರಿಕರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ. ಕಳೆದ 18 ವರ್ಷಗಳಿಂದ ತಾಲಿಬಾನ್‌ ವಿರುದ್ಧ ಯುದ್ಧ ನಡೆಯುತ್ತಿದ್ದು, ಸಾವು– ನೋವುಗಳನ್ನು ಅದು ದಾಖಲಿಸಿದೆ.   

‘ಹಿಂಸೆಯನ್ನು ಕೊನೆಗಾಣಿಸುವ ಒಪ್ಪಂದ’ಕ್ಕೆ ಇದೇ 29ರಂದು ಅಮೆರಿಕ– ತಾಲಿಬಾನ್‌ ಸಹಿ ಹಾಕಲಿವೆ. ಅಫ್ಗಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಯಾಗುವ ದಿಸೆಯಿಂದ ವಿಶ್ವಸಂಸ್ಥೆಯು ಈ ವರದಿಯನ್ನು ಶನಿವಾರ ಬಿಡುಗಡೆ ಮಾಡಿದೆ. 

‘ನಡೆಯುತ್ತಿರುವ ಹಿಂಸೆಯಿಂದ ಬಹುತೇಕ ಅಫ್ಗಾನಿಸ್ತಾನದ ಯಾವೊಬ್ಬ ನಾಗರಿಕನು ಪಾರಾಗಿಲ್ಲ. ಒಂದಲ್ಲಾ ಒಂದು ಮಾದರಿಯಲ್ಲಿ ಹಿಂಸೆಗೊಳಗಾಗಿದ್ದಾನೆ. ಎಲ್ಲ ನಾಗರಿಕರನ್ನು ರಕ್ಷಿಸುವ ಮತ್ತು ಶಾಂತಿ ಸ್ಥಾಪನೆಯ ಪ್ರಯತ್ನಗಳು ಇದೀಗ ನಡೆಯುತ್ತಿವೆ’ ಎಂದು ಅಫ್ಗಾನಿಸ್ತಾನದಲ್ಲಿರುವ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ತಡಮಿಶಿ ಯಾಮಮೊಟೊ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು