ಮಂಗಳವಾರ, ಆಗಸ್ಟ್ 20, 2019
22 °C

ಶಾಂತಿಪಾಲನಾ ಸಿಬ್ಬಂದಿ ಸೇರಿ ಆರು ಜನರ ಹತ್ಯೆ

Published:
Updated:

ವಿಶ್ವಸಂಸ್ಥೆ: ಸುಡಾನ್‌ ಹಾಗೂ ದಕ್ಷಿಣ ಸುಡಾನ್‌ನ ವಿವಾದಿತ ಗಡಿ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಸಿಬ್ಬಂದಿ ಹಾಗೂ ಐವರು ನಾಗರಿಕರನ್ನು ಹತ್ಯೆ ಮಾಡಲಾಗಿದೆ.

ಅಬೈ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಶಾಂತಿಪಾಲನಾ ಪಡೆಯ ಇಬ್ಬರು ಸಾವನ್ನಪ್ಪಿದಂತಾಗಿದೆ ಎಂದು ವಿಶ್ವಸಂಸ್ಥೆಯ ಉಪ ವಕ್ತಾರ ಫರಾನ್‌ ಹಕ್‌ ತಿಳಿಸಿದ್ದಾರೆ. ಇಥಿಯೋಪಿಯಾದಲ್ಲಿ ಒಬ್ಬರನ್ನು ಈಚೆಗೆ ಹತ್ಯೆ ಮಾಡಲಾಗಿತ್ತು.

 

Post Comments (+)