ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯ ದೇಶಗಳ ಆಯ್ಕೆಗೆ ಚುನಾವಣೆ

Last Updated 17 ಜೂನ್ 2020, 6:50 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಬುಧವಾರ ನಡೆಯುವ ಚುನಾವಣೆಯಲ್ಲಿ ಭಾರತ ಸುಲಭವಾಗಿ ಆಯ್ಕೆಯಾಗುವ ನಿರೀಕ್ಷೆಯಿದೆ. 2021–22ನೇ ಸಾಲಿನ ಕಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಬಲಿಷ್ಠ ಭದ್ರತಾ ಮಂಡಳಿಯನ್ನು ಭಾರತ ಸೇರಲಿದೆ.

75ನೇ ಅಧಿವೇಶನದ ಅಧ್ಯಕ್ಷ, ಭದ್ರತಾ ಮಂಡಳಿಯ ಐದು ಕಾಯಂ ಅಲ್ಲದ ಸದಸ್ಯ ದೇಶಗಳು ಹಾಗೂ ಆರ್ಥಿಕ–ಸಾಮಾಜಿಕ ಮಂಡಳಿಯ ಸದಸ್ಯ ಹುದ್ದೆಗೆ 193 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯ ಸಾಮಾನ್ಯಸಭೆಯು ಚುನಾವಣೆ ನಡೆಸಲಿದೆ. ಕೋವಿಡ್ ಕಾರಣದಿಂದ ಮತದಾನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.

ಏಷ್ಯಾ–ಪೆಸಿಫಿಕ್ ಭಾಗದಿಂದಭಾರತ ಸ್ಪರ್ಧಿಸುತ್ತಿದ್ದು, ಈ ಭಾಗದಿಂದ ಚುನಾವಣಾ ಸ್ಪರ್ಧಾ ಕಣದಲ್ಲಿರುವ ಏಕೈಕ ದೇಶವಾಗಿದೆ. ಭಾರತದ ಉಮೇದುವಾರಿಕೆಯನ್ನು 55 ಸದಸ್ಯ ದೇಶಗಳ ಏಷ್ಯಾ–ಪೆಸಿಫಿಕ್ ಗುಂಪು ಅನುಮೋದಿಸಿದೆ. ಚೀನಾ, ಪಾಕಿಸ್ತಾನ ಕೂಡ ಭಾರತದ ಆಯ್ಕೆಗೆ ಬೆಂಬಲ ಸೂಚಿಸಿವೆ.

ಆಫ್ರಿಕಾ ಹಾಗೂ ಏಷ್ಯಾ–ಪೆಸಿಫಿಕ್ ಭಾಗದಿಂದ ಜಿಬೌಟಿ, ಭಾರತ ಹಾಗೂ ಕೀನ್ಯಾ ಸ್ಪರ್ಧೆಯಲ್ಲಿವೆ. ಭಾರತ ಹಾಗೂ ಕೀನ್ಯಾ ದೇಶಗಳು ಆಯ್ಕೆಗೆ ಅನುಮೋದನೆ ಪಡೆದಿವೆ.

ಪ್ರತಿ ವರ್ಷ ಎರಡು ವರ್ಷಗಳ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯ ದೇಶಗಳ ಆಯ್ಕೆಗೆ ಚುನಾವಣೆ ನಡೆಯುತ್ತದೆ. 10 ಸದಸ್ಯ ಸ್ಥಾನಗಳನ್ನು ವಿಭಾಗವಾರು ಹಂಚಿಕೆ ಮಾಡಲಾಗಿದೆ.ಮೂರನೇ ಎರಡರಷ್ಟು ಬಹುಮತ ಪಡೆಯುವ ದೇಶಗಳು ಚುನಾವಣೆಯಲ್ಲಿ ಆಯ್ಕೆಯಾಗಲಿವೆ.

ವಿಶ್ವಸಂಸ್ಥೆಯ ಸಂಸ್ಥಾಪಕ ಸದಸ್ಯ ದೇಶಗಳಲ್ಲಿ ಒಂದಾಗಿರುವ ಭಾರತವು ಭದ್ರತಾ ಮಂಡಳಿಯಲ್ಲಿ ಕಾಯಂ ಅಲ್ಲದ ಸದಸ್ಯ ದೇಶವಾಗಿ ಎರಡು ವರ್ಷಗಳ ಅವಧಿಗೆ ಆಯ್ಕೆಯಾಗುತ್ತಿರುವುದು ಮಹತ್ವದ ಬೆಳವಣಿಗೆ ಎಂದು ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಹೇಳಿದ್ದಾರೆ.

ಭಾರತ ಈ ಹಿಂದೆ ಹಲವು ಭಾರಿ ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯ ದೇಶವಾಗಿ ಆಯ್ಕೆಯಾಗಿತ್ತು. 2011–12ರಲ್ಲಿ ಕೊನೆಯದಾಗಿ ಆಯ್ಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT